Gavel on desk. Isolated with good copy space. Dramatic lighting. 
ಜಿಲ್ಲೆ

ಮಳಲಿ ಮಸೀದಿ ಜಮೀನು ವಿವಾದ ವಿಎಚ್‌ಪಿ ಪರ ಸಲ್ಲಿಸಿದ ಅರ್ಜಿ ವಜಾ

ಹರೀಶ ಎಂ.

ಮಂಗಳೂರು : ಮಳಲಿ ಮಸೀದಿಯ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ವಿಎಚ್‌ಪಿ ಪರ ಸಲ್ಲಿಸಿದ ಅರ್ಜಿಯೊಂದನ್ನು ಮಂಗಳೂರಿನ ಸಹಾಯಕ ಆಯುಕ್ತರ ನ್ಯಾಯಾಲಯ ತಿರಸ್ಕರಿಸಿದೆ.

ಈ ಹಿಂದೆ ಮಸೀದಿ ಇರುವ ಜಾಗದ ಆರ್ ಟಿಸಿಯ ಕಾಲಂ 9 ರಲ್ಲಿ ಕಂದಾಯ ಭೂಮಿ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೇ ಈ ಬಗ್ಗೆ ತಡೆಯಾಜ್ಞೆ ಇತ್ತು. ಆದರೆ ಇತ್ತೀಚೆಗೆ ರಾಜ್ಯದ ಹಲವೆಡೆ ಉಂಟಾಗಿರುವ ವಕ್ಫ್ ವಿವಾದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿ ಮಳಲಿ ಮಸೀದಿಯ ಬಗ್ಗೆಯೂ ಅರ್ಜಿ ಸಲ್ಲಿಸಲಾಗಿತ್ತು. ಈ ಹಿಂದಿನ ದಾಖಲೆ ಬದಲಾಯಿಸಬಾರದು. ಈ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ಆಗುವವರೆಗೂ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದು ವಿ ಎಚ್ ಪಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಆರ್ಜಿಯನ್ನು ಸಹಾಯಕ ಆಯುಕ್ತರು ತಿರಸ್ಕರಿಸಿದ್ದಾರೆ. ಹಾಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ವಿ ಎಚ್ ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.