ಕನಕಗಿರಿ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಡುವ ಬಸ್ಸಿಗೆ ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕ ಶನಿವಾರ ಚಾಲನೆ ನೀಡಿದರು. ನಿರ್ವಾಹಕ ಉಮೇಶ, ಚಾಲಕರಾದ ಮಹಾಂತೇಶ, ಬಸಯ್ಯ ಕೋಳಿ ಇತರರಿದ್ದರು. 
ಜಿಲ್ಲೆ

ಮಂಗಳೂರು ಬಸ್ ಸಂಚಾರ ಪುನರಾರಂಭ

Kopala - Desk - Eraveni

ಕನಕಗಿರಿ: ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದ ಕನಕಗಿರಿಯಿಂದ ಮಂಗಳೂರು ಹೊರಡುತ್ತಿದ್ದ ಬಸ್ ಸಂಚಾರ ಶನಿವಾರ ಪುನರಾರಂಭಗೊಂಡಿದೆ.

ಪ್ರತಿದಿನ ಕನಕಗಿರಿಯಿಂದ ಸಂಜೆ 5ಕ್ಕೆ ಹೊರಡುವ ಕೊಪ್ಪಳ ಡಿಪೋದ ಬಸ್, ಕೊಪ್ಪಳ, ಗದಗ, ಹುಬ್ಬಳ್ಳಿ, ಅಂಕೋಲಾ, ಮುರುಡೇಶ್ವರ, ಉಡುಪಿ, ಚಿಕ್ಕಮಗಳೂರು ಮಾರ್ಗವಾಗಿ ಮರುದಿನ ಬೆಳಗ್ಗೆ 7ಕ್ಕೆ ಮಂಗಳೂರು ತಲುಪಲಿದೆ.

ಪ್ರತಿದಿನ ರಾತ್ರಿ 8.15 ಮಂಗಳೂರಿನಿಂದ ಹೊರಡುವ ಬಸ್, ಮರುದಿನ ಬೆಳಗ್ಗೆ 9ಕ್ಕೆ ಕನಕಗಿರಿಗೆ ಬರಲಿದೆ ಎಂದು ಸಂಚಾರ ನಿಂಯಂತ್ರಕ ಶ್ರೀರಾಮ್ ನಾಯಕ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲುಮಠ ಮಾತನಾಡಿ, ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೇನು ಕೊರತೆಯಿಲ್ಲ. ಕೂಲಿ ಕೆಲಸ ಸೇರಿ ನಾನಾ ಕಾರ್ಯಗಳಿಗೆ ಪ್ರಯಾಣ ಬೆಳೆಸುತ್ತಿದ್ದು, ಬಸ್ ಪುನರಾರಂಭವಾಗಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದರು.

ನಿರ್ವಾಹಕ ಉಮೇಶ, ಚಾಲಕರಾದ ಮಹಾಂತೇಶ, ಬಸಯ್ಯ ಕೋಳಿ, ಪ್ರಮುಖರಾದ ಹೊನ್ನೂರಸಾಬ್ ಉಪ್ಪು, ರಾಜಾಸಾಬ್ ನಂದಾಪುರ, ಕಂಠಿರಂಗ ನಾಯಕ, ಅನಿಲ್ ಬಿಜ್ಜಳ, ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ್, ವಿರೂಪಾಕ್ಷಿ ಇತರರಿದ್ದರು.