ಜಿಲ್ಲೆ

VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!? ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಂಡ್ಯ: ಕೆಲವೊಮ್ಮೆ ಸಿಸಿಟಿವಿಯಲ್ಲಿ ದಾಖಲಾಗುವ ವಿಚಿತ್ರ ದೃಶ್ಯಗಳು ಯಾವುದೋ ಅಗೋಚರ ಶಕ್ತಿ ಇರುವಿಕೆಯನ್ನು ನಿರೂಪಿಸುತ್ತದೆ. ಅಂಥದ್ದೆ ವಿಚಿತ್ರ ದೃಶ್ಯವೊಂದು ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮದ ಸಂಚಾರ ದೃಶ್ಯವೆಂದು ಹೇಳಲಾಗುತ್ತಿದೆ.

ಇದೀಗ ಸಿಸಿಟಿವಿ ದೃಶ್ಯವನ್ನು ನೋಡಿ ನಗುವನಹಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದಾಗಿ ಆ ಸ್ಥಳದ ಕಡೆ ಓಡಾಡಲು ಊರಿನ ಜನರ ಭಯ ಪಡುತ್ತಿದ್ದಾರೆ. ಅಂದಹಾಗೆ ವಿಚಿತ್ರ ದೃಶ್ಯ ಸೆರೆಯಾಗಿರುವುದು ನಗುವನಹಳ್ಳಿ ಗ್ರಾಮದ ಗೋಪಾಲ್ ಎಂಬುವರ ತೋಟದ ಮನೆಯ ಬಳಿ. ಜನವರಿ 31ರಂದು ದೃಶ್ಯ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?: ಹಗಲಿನ ವೇಳೆಯಲ್ಲೇ ಗಾಳಿಯಲ್ಲಿ ಕಪ್ಪು ಬಣ್ಣದಲ್ಲಿ ವಿಚಿತ್ರ ಆಕಾರವೊಂದು ಚಲಿಸುತ್ತಾ ಹುಲ್ಲಿನ ಮೆದೆಯತ್ತ ಸಾಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ಹುಲ್ಲನ್ನು ತೆಗೆದುಕೊಳ್ಳುತ್ತಿರುವುದು ಮತ್ತು ಅವನ ಮೇಲೆಯೇ ಕಪ್ಪು ಆಕಾರ ಇರುವುದು ದೃಶ್ಯದಲ್ಲಿ ಗೋಚರವಾಗುತ್ತದೆ.

ಕಳೆದ ಎರಡ್ಮೂರು ತಿಂಗಳಿನಿಂದ ಆ ಸ್ಥಳದ ಬಳಿ ಮೂರ್ನಾಲ್ಕು ಜನರ ಸಾವಾಗಿದೆ. ಸಾವಿಗೀಡಾದವರಲ್ಲಿ ಒಂದಿಬ್ಬರು ದೆವ್ವವಾಗಿರೋ ಬಗ್ಗೆ ಗ್ರಾಮದ ಜನರಲ್ಲಿ ವದಂತಿ ಹರಿದಾಡುತ್ತಿದೆ. ಸಿಸಿಟಿವಿ ದೃಶ್ಯ ನೋಡಿ ಹಗಲಿನಲ್ಲಿಯೂ ಸಂಚರಿಸಲು ಜನ ಭಯಪಡುತ್ತಿದ್ದಾರೆ. ಇನ್ನು ರಾತ್ರಿ ವೇಳೆಯಂತೂ ಆ ಕಡೆ ತಲೆ ಹಾಕಿಯು ಜನರು ಮಲಗುತ್ತಿಲ್ಲ. (ದಿಗ್ವಿಜಯ ನ್ಯೂಸ್​)