ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಮತ್ತು ಬರುವ ಕೇಕ್ ತಿನ್ನಿಸಿ ಯುವತಿಯೊಬ್ಬಳ ಮೇಲೆ ಮಂಡ್ಯ ಮೂಲದ ಯುವಕನೊರ್ವ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಯುವತಿಯ ಅಶ್ಲೀಲ ವಿಡಿಯೋ ಚಿತ್ರಿಕರಿಸಿರುವ ಆರೋಪಿಯನ್ನು ಚಂದ್ರಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದು, ಆತನನ್ನು ಸಾಗರ್ ಗೌಡ ಎಂದು ಗುರುತಿಸಲಾಗಿದೆ. ಬೆಂಗಳೂರಲ್ಲಿ ಅನ್ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಯುವತಿ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ಬ್ಲ್ಯಾಕ್ಮೇಲ್ ಮಾಡಿ ಹಣವನ್ನು ಪೀಕಿರುವ ಆರೋಪ ಕೇಳಿಬಂದಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವತಿಯ ಸಂಬಂಧಿಯ ಬರ್ತಡೇ ಪಾರ್ಟಿಯಲ್ಲಿ ಆರೋಪಿ ಸಾಗರ್ ಪರಿಚಯವಾಗಿದ್ದ. ಮೊದಲೇ ಕೆಲಸ ಹುಡುಕುತ್ತಿದ್ದ ಯುವತಿಯನ್ನು ರೆಸ್ಯೂಮ್ ತೆಗೆದುಕೊಂಡು ಬಾ..ಕೆಲ್ಸ ಕೊಡಿಸುತ್ತೇನೆಂದು ನಂಬಿಸಿದ್ದಾನೆ. ಆತನನನ್ನು ನಂಬಿದ ಯುವತಿ ರೆಸ್ಯೂಮ್ ಹಿಡಿದುಕೊಂಡು ಆತನ ಜತೆಯಲ್ಲಿ ಹೋಗಿದ್ದಾಳೆ. ಆದರೆ, ಆರೋಪಿ ಮೊದಲು ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ. ಬಳಿಕ ಕೇಕ್ನಲ್ಲಿ ಮತ್ತು ಬರುವ ಪೌಡರ್ ಹಾಕಿ, ಅಕ್ಕನ ಮಗನ ಬರ್ತಡೆ ಕೇಕ್ ಎಂದು ತಿನ್ನಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ಯುವತಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ.
ಎಲ್ಲಿ ಯುವತಿ ಪೊಲೀಸರಿಗೆ ದೂರು ನೀಡುತ್ತಾಳೋ ಎಂಬ ಭಯದಲ್ಲಿ ಮದುವೆ ಆಗುವ ನಾಟಕವನ್ನು ಆಡಿದ್ದಾನೆ. ಆತಂಕಕಾರಿ ವಿಚಾರವೆಂದರೆ ಮೋಸ ಹೋದ ಸಂತ್ರಸ್ತ ಯುವತಿ ಆರೋಪಿಗೆ 27ನೇಯವಳಂತೆ. ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಯುವತಿ, ಮಂಡ್ಯದ ಮಳವಳ್ಳಿ ಬಳಿಯಿರುವ ಆರೋಪಿ ಸಾಗರ್ ಪೋಷಕರಿಗೆ ತಿಳಿಸಿದರೆ, ಅವರಿಂದ ಬಂದ ಉತ್ತರ ಕೇಳಿ ಆಘಾತಕ್ಕೊಳಗಾಗಿದ್ದಾಳೆ.
ಇದನ್ನೂ ಓದಿ: ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?
ನೀನು ನನ್ನ ಮಗನಿಗೆ 27ನೇಯವಳು. ನಿನಗೂ ಮೊದಲು ಇಪ್ಪತೈದು- ಇಪ್ಪತ್ತಾರು ಜನ ಹುಡುಗಿಯರ ಜೀವನವನ್ನು ನನ್ನ ಮಗ ಹಾಳು ಮಾಡಿದ್ದಾನೆ. ಅವರಿಗೆಲ್ಲ ಮೊದಲು ನ್ಯಾಯ ಕೊಡಿಸಿ, ಆಮೇಲೆ ನಿನಗೆ ಮದುವೆ ಮಾಡಿಸ್ತೀನಿ ಎಂದನಂತೆ ಅಂತ ಆರೋಪಿಯ ತಂದೆ. ಇದೀಗ ನೊಂದ ಯುವತಿಯಿಂದ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಸಾಗರ್ ಗೌಡನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)