ಪಡುಬಿದ್ರಿ: ಗೋವುಗಳು ರೈತರ ಜೀವನಾಡಿಯಾಗಿದ್ದು, ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಕಾಲುಬಾಯಿ ರೋಗ ತಡೆಗಟ್ಟಲು ಎಲ್ಲ ಗೋವುಗಳಿಗೆ ಕಡ್ಡಾಯ ಲಸಿಕೆ ಹಾಕಿಸಬೇಕು ಎಂದು ತಹಸೀಲ್ದಾರ್ ಪ್ರತಿಭಾ ಆರ್.ಹೇಳಿದರು.
ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಗೋಶಾಲೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಅಭಿಯಾನ ಇಡೀ ತಾಲೂಕಿನಲ್ಲಿ ಅ.21ರಿಂದ ನ.20ರವರೆಗೆ ಒಂದು ತಿಂಗಳು ನಡೆಯಲಿದ್ದು, ಯಾವ ಜಾನುವಾರುಗಳನ್ನೂ ಬಿಡದೆ ಕಡ್ಡಾಯ ಲಸಿಕೆ ಹಾಕಿಸಬೇಕೆಂದು ಪಶು ವೈದ್ಯಕೀಯ ಇಲಾಖೆ ವೈದ್ಯರಿಗೆ ಸೂಚಿಸಿದರು.
ಗೋವಿಗೆ ಮಾಲೆ ಹಾಕಿ, ಕುಂಕುಮ ಹಚ್ಚಿ, ಆರತಿ ಬೆಳಗಿ ಪೂಜಿಸಿ ಗೊಗ್ರಾಸ ನೀಡಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಶು ವೈದ್ಯಾಧಿಕಾರಿಗಳಾದ ಡಾ.ಅರುಣ್ ಕುಮಾರ್ ಹೆಗ್ಡೆ, ಪ್ರಶಾಂತ್ ವಿಜಯಕುಮಾರ್, ಗೋಶಾಲೆ ಮುಖ್ಯಸ್ಥ ರೋಹಿ ಕಿಣಿ, ಹಾಗೂ ಪಶು ಸಖಿಯರು ಉಪಸ್ಥಿತರಿದ್ದರು.