ಉಡುಪಿ: ಅಮಾನವೀಯ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಸತ್ತ ನಾಯಿಯ ಕೊರಳಿಗೆ ಚೈನ್ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಜಿಲ್ಲೆಯ ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬ ವ್ಯಕ್ತಿಯು ಸತ್ತ ನಾಯಿಯ ಕೊರಳಿಗೆ ಚೈನ್ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದಿರುವ ವ್ಯಕ್ತಿ. ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಸುಮಾರು 5 ಕಿ.ಮೀ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ. ಆದರೆ ಆ ವ್ಯಕ್ತಿ ಹೀಗ್ಯಾಕೆ ಮಾಡಿದಾ ಎಂಬುದುಬ ಈವರೆಗೆ ಅರ್ಥವಾಗಿಲ್ಲ.
ಆ ಶ್ವಾನ ಸತ್ತಿದ್ದು ಹೇಗೆ ಅದು ತಾನೇ ಸಾಕಿದ ಅಥವಾ ಬೀದಿ ನಾಯಿನಾ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.