ಜಿಲ್ಲೆ

ಪಿಕ್‌ಅಪ್ ಡಿಕ್ಕಿಯಾಗಿ ವ್ಯಕ್ತಿಗೆ ಗಂಭೀರ ಗಾಯ

ವಂಡಾರು: ಕಿರಾಡಿ ಜಂಕ್ಷನ್ ಬಳಿ ಭಾನುವಾರ ರಸ್ತೆ ದಾಟುತ್ತಿದ್ದ ಸಂದರ್ಭ ಗೇರುಬೀಜ ಕಾರ್ಖಾನೆ ಕಾರ್ಮಿಕರೊಬ್ಬರಿಗೆ ಪಿಕ್‌ಅಪ್ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಿದೆ. ವಂಡಾರು ಚಿತ್ತಾರ ಗೇರುಬೀಜ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುವ ಬಿಹಾರ ಮೂಲದ ಸಚಿನ್ ಶಿರೂರು ಮೂರುಕೈಯಲ್ಲಿ ಚಿಕನ್ ಖರೀದಿಸಿ ವಾಪಸಾಗುತ್ತಿದ್ದ ಸಂದರ್ಭ ಪಿಕ್‌ಅಪ್ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಸಚಿನ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರನಾರಾಯಣ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.