ಜಿಲ್ಲೆ

ಮೆಹಂದಿ ಕಾರ್ಯಕ್ರಮದಲ್ಲಿ ಕುಣಿದು ಕುಸಿದು ಬಿದ್ದು ಸಾವು; ಸಂಭ್ರಮದ ಮಧ್ಯೆ ಕ್ಷಣಮಾತ್ರದಲ್ಲೇ ಆವರಿಸಿದ ಶೋಕ..

Webdesk - Ravikanth

ಉಡುಪಿ: ಸಂಭ್ರಮದಲ್ಲಿರುವಾಗಲೇ ಇದ್ದಕ್ಕಿದ್ದಂತೆ ಶೋಕದ ವಾತಾವರಣ ಉಂಟಾದ ಅನೇಕ ಪ್ರಕರಣಗಳು ಈಗಾಗಲೇ ಹಲವು ನಡೆದಿವೆ. ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ವ್ಯಕ್ತಿಯೊಬ್ಬರು ಮೆಹಂದಿ ಕಾರ್ಯಕ್ರಮದ ಸಂಭ್ರಮದಲ್ಲಿದ್ದಾಗಲೇ ಸಾವಿಗೀಡಾಗಿದ್ದಾರೆ.

ಉಡುಪಿ ಜಿಲ್ಲೆಯ ಅಂಬಾಗಿಲು ಪುತ್ತೂರು ಬಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಗಣಪತಿ ಆಚಾರ್ಯ ಎಂಬವರು ಸಾವಿಗೀಡಾದವರು. ಇವರು ಸಂಬಂಧಿಕರ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಲ್ಲರೂ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿರುವಾಗ, ಕುಣಿದು ದಣಿದು ಸುಸ್ತಾಗಿ ನಿಂತ ಇವರು ಹಾಗೇ ಅಲ್ಲಿ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತರು. ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿದ್ದ ಇನ್ನೊಬ್ಬರ ಒರಗುತ್ತ ಕೆಳಕ್ಕೆ ಬಿದ್ದಿದ್ದು, ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಇವರು ಸಾವಿಗೀಡಾಗಿದ್ದಾರೆ. ಹೃದಯಾಘಾತದಿಂದ ಸಾವಿಗೊಳಗಾಗಿದ್ದಾರೆ ಎನ್ನಲಾಗಿದೆ.