Live-In-Partner: ಲಿವ್-ಇನ್ ಸಂಬಂಧಕ್ಕೆ ಒಪ್ಪಿಕೊಂಡು, ಜೊತೆಗಿದ್ದ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬ, ಇದೀಗ ಆಕೆಯ ಸಾವಿಗೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ದೇವಸ್ಥಾನದ ಸಿಬ್ಬಂದಿ ಹತ್ಯೆಯ ವಿಡಿಯೋ ವೈರಲ್: ಛೀಮಾರಿ ಹಾಕಿದ ಬಾಲಿವುಡ್ ನಟಿ ಸ್ವರಾ ಭಾಸ್ಕರ್! | Swara Bhasker
ಮೃತ ಮಹಿಳೆಯನ್ನು ವನಜಾಕ್ಷಿ (35) ಎಂದು ಗುರುತಿಸಲಾಗಿದ್ದು, ತನ್ನ ಲಿವ್-ಇನ್ ಪಾರ್ಟ್ನರ್ನಿಂದ ಮೃತಪಟ್ಟ ದುರ್ದೈವಿ. ಬೆಂಕಿಯಲ್ಲಿ ಬೆಂದು ಹೋಗಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಯಿತು. ಆದರೆ, ವಿಪರೀತ ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾಳೆ.
'ಎನ್ಡಿಟಿವಿ' ವರದಿ ಪ್ರಕಾರ, ಆರೋಪಿ ವಿಠಲ್, ವೃತ್ತಿಯಲ್ಲಿ ಓರ್ವ ಕ್ಯಾಬ್ ಚಾಲಕ. ಈತನಿಗೆ ಕುಡಿತದ ಚಟವಿತ್ತು. ವನಜಾಕ್ಷಿಗೂ ಮೊದಲು ಆತನಿಗೆ ಮೂರು ಮದುವೆಯಾಗಿತ್ತು. ಅತ್ತ ಆಕೆಗೆ ಈ ಹಿಂದೆ ಎರಡು ಮದುವೆಯಾಗಿತ್ತು. ಇದಾದ ಬಳಿಕ ಪರಿಚಯಗೊಂಡ ಇವರಿಬ್ಬರು, ನಾಲ್ಕು ವರ್ಷಗಳ ಹಿಂದೆ ಲಿವ್-ಇನ್ ಸಂಬಂಧಕ್ಕೆ ಒಪ್ಪಿಕೊಂಡಿದ್ದರು. ಆದರೆ, ವಿಠಲ್ನ ಕುಡಿತಕ್ಕೆ ಬೇಸತ್ತ ಮಹಿಳೆ, ಇತ್ತೀಚೆಗಷ್ಟೇ ಈ ಸಂಬಂಧ ಕಡಿದುಕೊಂಡು, ಹೊರನಡೆದಿದ್ದಳು. ಇದರಿಂದ ಕುಪಿತಗೊಂಡಿದ್ದ ಆರೋಪಿ, ಆಕೆಗೆ ಮರಿಯಪ್ಪ ಎಂಬ ವ್ಯಕ್ತಿಯೊಂದಿಗೆ ಸ್ನೇಹವಿರುವುದನ್ನು ತಿಳಿದಿದ್ದನು ಎಂದು ವರದಿಯಾಗಿದೆ.
ಇದನ್ನೂ ಓದಿ: ವಾಹನಗಳಿಗೆ ಬೆಳಗ್ಗೆ ಬೇಗನೆ ಪೆಟ್ರೋಲ್, ಡೀಸೆಲ್ ಹಾಕಿಸುವುದರಿಂದ ಮೈಲೇಜ್ ಹೆಚ್ಚಾಗುತ್ತಾ.? Petrol Filling
ಈ ಘಟನೆ ನಡೆಯುವ ದಿನ, ವನಜಾಕ್ಷಿ ಸಾಗುತ್ತಿದ್ದ ಕಾರನ್ನು ಹಿಂಬಾಲಿಸಿದ ವಿಠಲ್, ಆಕೆ ದೇವಸ್ಥಾನದಿಂದ ಹಿಂತಿರುಗುವವರೆಗೂ ಅಲ್ಲೇ ಕಾದು ಕುಳಿತ್ತಿದ್ದ. ನಂತರ, ಟ್ರಾಫಿಕ್ ಸಿಗ್ನಲ್ ಬಳಿ ಆಕೆಯಿದ್ದ ಕಾರನ್ನು ತಡೆದ ಆತ, ವನಜಾಕ್ಷಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ. ಈ ವೇಳೆ ಕಾರಿನಲ್ಲಿದ್ದ ಚಾಲಕ ಮತ್ತು ಮರಿಯಪ್ಪ ಬಚಾವ್ ಆಗಿದ್ದಾರೆ. ಆದರೆ, ಮಹಿಳೆ ಪೂರ್ಣವಾಗಿ ಬೆಂದುಹೋಗಿದ್ದಳು. ಸುಮಾರು 60 ಭಾಗ ಸುಟ್ಟ ಗಾಯಗಳಿಂದ ನರಳಾಡಿದ ವನಜಾಕ್ಷಿ, ಕಡೆಗೂ ಬದುಕುಳಿಯಲಿಲ್ಲ. ಘಟನೆ ನಡೆದ 24 ಗಂಟೆಗಳ ಅವಧಿಯಲ್ಲಿ ಆರೋಪಿ ವಿಠಲ್ನನ್ನು ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).