ಜಿಲ್ಲೆ

ಕಾಣೆಯಾದ ಪತ್ನಿಗಾಗಿ ಮೊಬೈಲ್ ಟವರ್ ಏರಿ ಕುಳಿತ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ| bengaluru

ಬೆಂಗಳೂರು: ರಾಜ್ಯ ರಾಜಧಾನಿಯ ಆನೇಕಲ್‌ನಲ್ಲಿ ನಿನ್ನೆ(ಆ.31) ಸಂಜೆ ಕಟ್ಟಡ ಕಾರ್ಮಿಕನೊಬ್ಬ 150 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ, ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ಪತ್ನಿ ರೋಜಾ ಜೊತೆ ತನ್ನ ಮನೆ ಮಾಲೀಕ ಹರೀಶ್ ಅನೈತಿಕ ಸಂಬಂಧ ಹೊಂದಿದ್ದಾನೆಂದು ಈತ ಆರೋಪಿಸಿದ್ದಾನೆ. ಹಾಗೂ ಹರೀಶ್​ನನ್ನು ತನ್ನ ಮುಂದೆ ಹಾಜರುಪಡಿಸಬೇಕೆಂದು ಒತ್ತಾಯಿಸಿದ್ದಾನೆ. ಭಾರೀ ಮಳೆಯ ನಡುವೆಯೂ, ಪೊಲೀಸರು ಅವನ ಜೊತೆ ಫೋನ್‌ನಲ್ಲಿ ಮಾತನಾಡುರತ್ತಿದ್ದಾಗ ಈತ ಅವರ್​ಗೆ ಅಂಟಿಕೊಂಡು ನಿಂತಿದ್ದನು ಎನ್ನಲಾಗಿದೆ.

ಚಿರಂಜೀವಿ ಎಂಬ ವ್ಯಕ್ತಿ ಸಂಜೆ 5 ಗಂಟೆ ಸುಮಾರಿಗೆ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ಪತ್ನಿ ರೋಜಾ ಮನೆಗೆ ಹಿಂತಿರುಗಬೇಕೆಂದು ಒತ್ತಾಯಿಸಿದ್ದಾನೆ. ತನ್ನ ಆಸೆ ಈಡೇರದಿದ್ದರೆ ಟವರ್​ ಮೇಲಿಂದ ಜಿಗಿಯುವುದಾಗಿ ಎಚ್ಚರಿಕೆ ನೀಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳು ಅವನ ಸ್ಥಳವನ್ನು ಪತ್ತೆಹಚ್ಚಿ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

(ಏಜೆನ್ಸೀಸ್)

ಈ ಘಟನೆಯ ಸಮಯದಲ್ಲಿ ಚಿರಂಜೀವಿ ಮದ್ಯದ ಪ್ರಭಾವದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೂರು ದಿನಗಳ ಹಿಂದೆ ಹರೀಶ್ ಕಾರಿನಲ್ಲಿ ಪತ್ನಿ ರೋಜಾಳನ್ನು ನೋಡಿದ್ದೇನೆ ಎಂದು ಹೇಳಿಕೊಂಡಾಗ ಅವನಿಗೆ ರೋಜಾ ಬಗ್ಗೆ ಅನುಮಾನಗಳು ಮೂಡಿವೆ. ಈ ಘಟನೆ ಬಳಿಕ ಪತ್ನಿಯ ಮೇಲೆ ಈತ ಹಲ್ಲೆ ಮಾಡಿದ್ದು, ಇದರಿಂದ ನೊಂದ ಆಕೆ ಆಗಸ್ಟ್​ 30 ರಂದು ಮನೆ ಬಿಟ್ಟು ಹೊರಟು ಹೋಗಿದ್ದಾಳೆ ಎನ್ನಲಾಗಿದೆ.

ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ರೋಜಾ ಅವರನ್ನು ಪತ್ತೆಹಚ್ಚಲಾಗುವುದು ಎಂದು ಅಧಿಕಾರಿ ತನ್ನ ಕುಟುಂಬ ದೇವತೆಯ ಮುಂದೆ ಪ್ರಮಾಣ ಮಾಡಿದ ಬಳಿಕ ಚಿರಂಜೀವಿ ಅಂತಿಮವಾಗಿ ಇಳಿಯಲು ಒಪ್ಪಿಕೊಂಡಿದ್ದಾರೆ ಇನ್ನೂ ನಿನ್ನೆ ಸಂಜೆ 7.30 ರ ಸುಮಾರಿಗೆ ಅವರು ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ.