ಜಿಲ್ಲೆ

ಗಣಪತಿ ಕಟ್ಟೆಯ ಮೆಟ್ಟಿಲು ಒಡೆದಿದ್ದ ಕಿಡಿಗೇಡಿಯ ಬಂಧನ

rashmirhebbur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉದನೆಯಲ್ಲಿ ಗಣಪತಿ ಕಟ್ಟೆಗೆ ಹಾನಿ ಮಾಡಿದ್ದ ಕಿಡಿಗೇಡಿಯನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರವೀಂದ್ರ ಕುಮಾರ್ ಎಂಬುವ ಬಂಧಿತ ಆರೋಪಿ.

ಉದನೆಯ ಗಣಪತಿ ಕಟ್ಟೆಯಲ್ಲಿ ಶುಕ್ರವಾರ ಸರಳ ಗಣೇಶೋತ್ಸವ ನಡೆದಿತ್ತು. ಸಂಜೆಯ ನಂತರ ಗಣೇಶೋತ್ಸವ ಸಮಿತಿ ಸದಸ್ಯರು ಗಣಪತಿ ವಿಗ್ರಹ ವಿಸರ್ಜನೆ ಮಾಡಿ ಮನೆಗಳಿಗೆ ತೆರಳಿದ್ದರು. ಅದಾದ ನಂತರ ರಾತ್ರಿಯ ವೇಳೆ ಆರೋಪಿ ರವೀಂದ್ರ ಕುಮಾರ್​ ಕಟ್ಟೆಯ ಅಲಂಕಾರಕ್ಕೆ ಬಳಸಿದ್ದ ಬಾಳೆಕಂದುಗಳನ್ನು ತುಂಡರಿಸಿದ್ದ. ಕಲ್ಲು ಎತ್ತಿಹಾಕಿ ಕಟ್ಟೆಯ ಮೆಟ್ಟಿಲಿಗೂ ಹಾನಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉದನೆ‌ಯಲ್ಲಿ ಓಡಾಡಿಕೊಂಡಿದ್ದ ಆರೋಪಿ ರವೀಂದ್ರ ಕುಮಾರ್​, ಈ ಹಿಂದೆ ಅಟೋರಿಕ್ಷಾ ಚಾಲಕನಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ.