ಎರಡನೇ ಶ್ರೀಶೈಲವೆಂದೆ ಖ್ಯಾತಿಯಾದ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ನೂರಾರು ಭಕ್ತರು ಸಾಲುಗಟ್ಟಿ ನಿಂತಿರುವುದು 
ಜಿಲ್ಲೆ

ಮಲ್ಲಿಕಾರ್ಜುನ ದರ್ಶನಕ್ಕೆ ಸಾಲುಗಟ್ಟಿದ ಭಕ್ತರು

Kopala - Desk - Eraveni

ಮಸ್ಕಿ: ಶ್ರಾವಣ ಮಾಸದ ಎರಡನೇ ಸೋಮವಾರದಂದು ಮಸ್ಕಿ ಪಟ್ಟಣದ ಬೆಟ್ಟದ ಮಲ್ಲಿಕಾರ್ಜುನ ದೇವರ ವಿಗ್ರಹಕ್ಕೆ ಅಭಿಷೇಕ ಸೇರಿ ವಿವಿಧ ಪೂಜ ಕೈಂಕರ್ಯಗಳು ನಡೆದವು. ದೇವರ ದರ್ಶನಕ್ಕಾಗಿ ಬೆಳಗ್ಗೆ ಯಿಂದಲೇ ನೂರಾರು ಭಕ್ತರು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿದೆ.

ಬೆಟ್ಟದ ಕೆಳಗಡೆ ಇರುವ ಶ್ರೀ ಭ್ರಮರಾಂಬ ದೇವಿ ದರ್ಶನ ಪಡೆದು, ಸುಮಾರು 500 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಹಲವರು ದೇವಸ್ಥಾನದ ಹಿಂಬದಿ ರಸ್ತೆಯಲ್ಲಿ ವಾಹನಗಳ ಮೂಲಕ ಬಂದು ದರ್ಶನ ಪಡೆಯುತ್ತಿದ್ದರು.

ಭಕ್ತರು ಸ್ವತಃ ಸ್ವಯಂ ಪ್ರೇರಿತರಾಗಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ, ಉಪಹಾರದ ವ್ಯವಸ್ಥೆ ಮಾಡಿದ್ದರು. ಬೆಟ್ಟ ಮೇಲೆ ಸುಗಮ ಸಂಚಾರಕ್ಕೆ ಮೆಟ್ಟಿಲುಗಳನ್ನು ವಿಭಜಕ ಮಾಡಿ ಒಂದು ಕಡೆ ಹೋಗಿ ಮತ್ತೊಂದು ಕಡೆಯಿಂದ ಇಳಿಯುವ ವ್ಯವಸ್ಥೆ ಮಾಡಿದ್ದರಿಂದ ಜನಸಂದಣಿ ಅಧಿಕವಾಗಿದ್ದರೂ ಹೋಗಿ ಬರಲು ತೊಂದರೆ ಆಗದಂತೆ ದೇವಸ್ಥಾನ ಸಮಿತಿಯವರು ಮುನ್ನಚ್ಚೆರಿಕೆ ವಹಿಸಿದ್ದಾರೆ.