ಅರಕೇರಾ: ಮಲ್ಲಾಪುರದಲ್ಲಿ ಶ್ರೀ ಆಂಜನೇಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಭಾನುವಾರ ಭಕ್ತರು ಜ್ಯೋತಿ ಹೊರುವ ಮೂಲಕ ಭಕ್ತಿ ಮೆರೆದರು. ಅಂದು ಸಂಜೆ ಊಟಿ ಬಸವೇಶ್ವರ ಸನ್ನಿಧಿಯ ಗಂಗಾಸ್ಥಳಕ್ಕೆ ತೆರಳಿ ಉದಕ ತಂದು ರಥ ಅಲಂಕರಿಸಲಾಯಿತು. ರಾತ್ರಿ ಆಂಜನೇಯ ರಥೋತ್ಸವ ಪಾದದಕಟ್ಟೆಯವರೆಗೆ ವಿಜೃಂಭಣೆಯಿಂದ ನೇರವೇರಿತು.
ಸೋಮವಾರ ಹಾಲಗಂಬ ಉತ್ಸವ ಏರ್ಪಡಿಸಲಾಗಿತ್ತು. 75 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಮಾಡಿ ಕಂಬದ ಮೇಲೆ ಪೂಜಾರಿ ಕುಳಿತು ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ ಬಿಟ್ಟರು. ಸ್ಪರ್ಧಿಗಳು ಕಂಬ ಏರಲು ಪೈಪೋಟಿ ತೋರಿಸಿದ್ದು, ಜನರಿಗೆ ಮನರಂಜನೆ ಒದಗಿಸಿತು. ಶಿವರಾಜ ಗಾಲಿ ಪ್ರಥಮವಾಗಿ ಕಂಬ ಏರುವ ಮೂಲಕ ಜಯ ಸಾಧಿಸಿದರು.