ಬೆಂಗಳೂರು: ಹೆಸರಾಂತ ಚಿನ್ನಾಭರಣ ಸಂಸ್ಥೆಯಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ನಗರದ ಕುವೆಂಪು ಬಡಾವಣೆಯ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಶುಕ್ರವಾರ ನೂತನ ಮಳಿಗೆಯನ್ನು ತೆರೆದಿದೆ.
6 ಸಾವಿರಕ್ಕೂ ಅಧಿಕ ವಿಸ್ತೀರ್ಣ ಹೊಂದಿರುವ ಈ ಮಳಿಗೆಯನ್ನು ಶಾಸಕ ಬೈರತಿ ಬಸವರಾಜ್, ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು. ವಿಶಾಲವಾದ ಮಳಿಗೆಯಲ್ಲಿ ನೂರಾರು ವಿನ್ಯಾಸದ ಚಿನ್ನಾಭರಣ ಸಂಗ್ರಹಿಸಲಾಗಿದೆ. ಚಿನ್ನ, ವಜ್ರ, ಪೋಲ್ಕಿ, ರತ್ನದ ಕಲ್ಲು, ಬೆಳ್ಳಿ, ಪ್ಲಾಟಿನಂ ಸೇರಿ ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಆಭರಣಗಳು ದೊರೆಯಲಿವೆ. ಎರಾ ಅನ್ಕಟ್, ಡಿವೈನ್ ಹೆರಿಟೇಜ್ ಜುವೆಲ್ಲರಿ, ಎಥ್ನಿಕ್ಸ್, ಪ್ರೆಸಿಯಾ ಜೆಮ್ಸ್ಟೋನ್, ವಿರಾಜ್ ಪೊಲ್ಕಿ ಸೇರಿ ಆಕರ್ಷಕ ಚಿನ್ನಾಭರಣ ಗ್ರಾಹಕರ ಕಣ್ಮನ ಸೆಳೆಯಲಿವೆ.
ಮಳಿಗೆ ಉದ್ಘಾಟನೆ ನಿಮಿತ್ತ ಮಾ.9ರವರೆಗೆ ಚಿನ್ನಾಭರಣ ಖರೀದಿಸಿದರೆ ಉಚಿತ ಬೆಳ್ಳಿ ನಾಣ್ಯ ದೊರೆಯಲಿದೆ.ಭಾರತ, ಮಧ್ಯಪ್ರಾಚ್ಯ, ಯುಎಸ್ಎ, ಯುಕೆ, ಕೆನಡಾ, ಆಸ್ಟ್ರೆಲಿಯಾ ಸೇರಿ ವಿಶ್ವದ 13 ದೇಶಗಳಲ್ಲಿ 375ಕ್ಕೂ ಅಧಿಕ ಮಲಬಾರ್ ಶೋರೂಂಗಳಿವೆ. 22 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಲಬಾರ್ ಗೋಲ್ಡ್ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು ಸೇರಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರಿದ್ದರು.
ಗ್ರಾಹಕರಿಗೆ ಪ್ರೀಮಿಯಂ ಶಾಪಿಂಗ್ ಅನುಭವ ನೀಡುವ ಉದ್ದೇಶದಿಂದ ಮಳಿಗೆ ತೆರೆಯಲಾಗಿದೆ. ಗ್ರಾಹಕರ ಅಭಿಲಾಷೆ ತಕ್ಕಂತೆ ಚಿನ್ನಾಭರಣ ಸಂಗ್ರಹಿಸಲಾಗಿದೆ. ಪ್ರತಿ ಆಭರಣದಲ್ಲೂ ಬೆಲೆಯ ವಿವರ ಇದೆ.ಜೀವಿತಾವಧಿಯ ಉಚಿತ ನಿರ್ವಹಣಾ ಸೇವೆ ಸೇರಿ ಹಳೆಯ ಚಿನ್ನ ಮತ್ತು ವಜ್ರಗಳಿಗೆ ಶೇ.100 ವಿನಿಮಯ ಮೌಲ್ಯ ಖಾತರಿ ನೀಡಲಾಗುತ್ತದೆ.
| ಎಂ.ಪಿ.ಅಹ್ಮದ್. ಮಲಬಾರ್ ಗ್ರೂಪ್ನ ಅಧ್ಯಕ್ಷ.