ಕುಕನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಆರ್.ಪಿ.ರಾಜೂರು, ನಿವೃತ್ತ ಪ್ರಾಚಾರ್ಯ ಆರ್.ಎನ್.ಜನಾದ್ರಿ, ಪ್ರಾಚಾರ್ಯ ಈಶಪ್ಪ ಮಳಗಿ ಇತರರಿದ್ದರು. 
ಜಿಲ್ಲೆ

ಅಮೂಲ್ಯ ಸಮಯ ಸದುಪಯೋಗಪಡಿಸಿಕೊಳ್ಳಿ

ರುದ್ರಪ್ಪ ವಾಲಿ

ಕುಕನೂರು: ಪ್ರಾಧ್ಯಾಪಕರ ಶ್ರಮ ಹಾಗೂ ಉತ್ತಮ ಬೋಧನೆಯಿಂದ ಕಾಲೇಜಿಗೆ ಹೆಸರು ಬರುತ್ತಿದೆ ಹಿರಿಯ ಸಾಹಿತಿ ಆರ್.ಪಿ.ರಾಜೂರು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸ ಮಾಡಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಆರ್.ಎನ್.ಜನಾದ್ರಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಿ ಅತಿ ಹೆಚ್ಚು ಅಂಕ ಗಳಿಸಿದಲ್ಲಿ ಜೀವನ ಬಂಗಾರ ಮಯವಾಗಲಿದೆ ಎಂದರು.

ಪ್ರಾಚಾರ್ಯ ಈಶಪ್ಪ ಮಳಗಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸರಾವ್ ದೇಸಾಯಿ, ಉಪನ್ಯಾಸಕ ಮಂಜುನಾಥ ಅಂಗಡಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಫಿ ಹಿರೇಹಾಳ, ನಿಂಗಪ್ಪ ಗೋರ್ಲೆಕೊಪ್ಪ, ಬರಮಪ್ಪ ತಳವಾರ, ವಿಜಯಲಕ್ಷ್ಮೀ, ಬಿನ್ನಾಳ, ಚೆನ್ನಪ್ಪ ಕೊರ್ಲಹಳ್ಳಿ, ಸುರೇಶ್ ಬಿನ್ನಾಳ ಇತರರಿದ್ದರು.