ಲಿಂಗಸುಗೂರು ಟಿಎಚ್‌ಒ ಡಾ.ಅಮರೇಶ ಪಾಟೀಲ್‌ಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಮೌನೇಶ ಬಳ್ಳಾಪುರ, ಸಲೀಂಖಾನ್, ಸಾರಪ್ಪ ಜೋಗೇರ್ ಇದ್ದರು. 
ಜಿಲ್ಲೆ

ಸಾಂಕ್ರಾಮಿಕ ರೋಗಕ್ಕೆ ಕ್ರಮ ವಹಿಸಿ

ಲಿಂಗಸುಗೂರು: ಮದ್ರಾಸ್ ಐ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಕಾರ್ಯಕರ್ತರು ಪಟ್ಟಣದಲ್ಲಿ ಟಿಎಚ್‌ಒ ಡಾ.ಅಮರೇಶ ಪಾಟೀಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಭಯದ ವಾತಾವರಣ ಮನೆ ಸೃಷ್ಟಿ

ತಾಲೂಕಿನಾದ್ಯಂತ ಮದ್ರಾಸ್ ಐ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಮಕ್ಕಳು ಸೇರಿ ಪ್ರತಿಯೊಬ್ಬರಲ್ಲೂ ಭಯದ ವಾತಾವರಣ ಮನೆ ಮಾಡಿದೆ. ಶಾಲಾ-ಕಾಲೇಜು, ವಸತಿ ನಿಲಯ ಸೇರಿ ಜನನಿಬಿಡ ಪ್ರದೇಶದಲ್ಲಿ ಸೋಂಕು ತೀವ್ರವಾಗಿ ವ್ಯಾಪಿಸಿಕೊಳ್ಳುತ್ತಿದೆ. ರೋಗ ನಿಯಂತ್ರಣಕ್ಕಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು. ಅಲ್ಲದೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು. ಬಸ್ ನಿಲ್ದಾಣ, ಮಾರುಕಟ್ಟೆ, ಚಿತ್ರ ಮಂದಿರ ಇತರೆ ಸ್ಥಳಗಳಲ್ಲೂ ಚಿಕಿತ್ಸಾ ಕೇಂದ್ರ ತೆರೆದು, ರೋಗ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.