ಉಳ್ಳಾಲ: ಮಧೂರು ಶ್ರೀ ಮದನಂತೇಶ್ವರ ದೇವಾಲಯದಲ್ಲಿ ಮಾ .27ರಿಂದ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಪ್ರಯುಕ್ತ ನಡೆಯುತ್ತಿರುವ ಕರಸೇವೆಯಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡರು.
ಶಾಲೆಯ ವತಿಯಿಂದ ನೀಡಲಾದ ಹೊರೆಕಾಣಿಕೆ ಸೇವೆಗಾಗಿ ಶಿಕ್ಷಕರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಕರಸೇವೆಯಲ್ಲಿ ತೊಡಗಿಸಿಕೊಂಡರು. ಸ್ವಯಂಸೇವಕರನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಶ್ಲಾಘಿಸಿದ್ದಾರೆ.