ಜಿಲ್ಲೆ

ಬದಿಯಡ್ಕ ಪ್ರಾದೇಶಿಕ ಸಮಿತಿ ರಚನೆ

ಬದಿಯಡ್ಕ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪ್ರಾದೇಶಿಕ ಸಮಿತಿ ರಚನಾ ಸಭೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ಸಮಿತಿ ಸದಸ್ಯ ಮುರಳೀ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬದಿಯಡ್ಕ ಪಂಚಾಯಿತಿ ಪ್ರಾದೇಶಿಕ ಸಮಿತಿಗೆ ಗೌರವಾಧ್ಯಕ್ಷರಾಗಿ ವಸಂತ ಪೈ ಬದಿಯಡ್ಕ, ನಿತ್ಯಾನಂದ ಶೆಣೈ ಬದಿಯಡ್ಕ, ಎಸ್.ಎನ್.ಮಯ್ಯ ಬದಿಯಡ್ಕ ಅವರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಭಾಸ್ಕರ ಕೆ.ಬದಿಯಡ್ಕ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಹರಿಪ್ರಸಾದ ರೈ ಪುತ್ರಕಳ ಅವರನ್ನು ಆಯ್ಕೆಗೊಳಿಸಲಾಯಿತು.