ಜಿಲ್ಲೆ

ಮದಗ ಫ್ರೆಂಡ್ಸ್ ಸಮಾಜಕ್ಕೆ ಮಾದರಿ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹಳ್ಳಿಯ ಯುವಕರು ಜನರೊಂದಿಗೆ ಇದ್ದು ಹೇಗೆ ಜನಸೇವೆ ಮಾಡಲು ಸಾಧ್ಯ ಎಂಬುದನ್ನು ಮುದ್ರಾಡಿ ಮದಗ ಫ್ರೆಂಡ್ಸ್ ಮಾಡಿ ತೋರಿಸಿದೆ. ಮದಗ ಫ್ರೆಂಡ್ಸ್ ಸಮಾಜ ಸೇವೆ, ಒಗ್ಗಟ್ಟು ಎಲ್ಲರಿಗೂ ಮಾದರಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ಹೆಬ್ರಿಯ ಮುದ್ರಾಡಿ ಮದಗ ಫ್ರೆಂಡ್ಸ್ ವತಿಯಿಂದ ಶನಿವಾರ ಮುದ್ರಾಡಿ ಶಾಲೆಯ ಸಭಾಭವನದಲ್ಲಿ ಮದಗದೈಸಿರ ಸಾಂಸ್ಕೃತಿಕ ಹಬ್ಬ 2024 ಉದ್ಘಾಟಿಸಿ ಮಾತನಾಡಿದರು. ಮದಗ ಫ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷ ವಹಿಸಿದ್ದರು. ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ, ವಸಂತಿ ಪೂಜಾರಿ, ಮಂಜುನಾಥ ಹೆಗ್ಡೆ, ಗಣಪತಿ ಮುದ್ರಾಡಿ, ಶುಭದರ ಶೆಟ್ಟಿ, ಶ್ರೀನಿವಾಸ ಭಂಡಾರಿ, ಸನತ್ ಕುಮಾರ್, ಮುದ್ರಾಡಿ ಮದಗ ಫ್ರೆಂಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ರೇಷ್ಮಾ ಸ್ವಾಗತಿಸಿದರು. ಪ್ರಕಾಶ ಪೂಜಾರಿ ಮತ್ತು ಚಂದ್ರಶೇಖರ ಭಟ್ ನಿರೂಪಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ

ಸಮಾಜಸೇವೆ ಮಾಡಿದ ಹಿರಿಯ ಮುದ್ದು ಪೂಜಾರಿ ಸಮಗಾರಬೆಟ್ಟು, ಶಾರದಾ ಆಚಾರ್ಯ ಬಲ್ಲಾಡಿ, ಸುಂದರ ಪೂಜಾರಿ ಮತ್ತು ಲಿಂಗಪ್ಪ ಪೂಜಾರಿ ಮದಗ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಸುದೀಪ್ ಶೆಟ್ಟಿಗಾರ್ ಉಪ್ಪಳ, ರಚಿತಾ ಕುಲಾಲ್ ಕಾಪೋಳಿ, ಅನಿಲ್ ಪೂಜಾರಿ ಜರ್ವತ್ತು, ರೇಷ್ಮಾ ಶೆಟ್ಟಿ ಮುದ್ದುಬೆಟ್ಟು ಆಶಿಶ್ ಕುಮಾರ್ ಮದಗ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.