ಜಿಲ್ಲೆ

ಅಪ್ರಾಪ್ತರ ಪ್ರೇಮ ಪ್ರಕರಣ, ತಂದೆ ನಿಗೂಢ ಸಾವು

ಸೌಮ್ಯ ಆರ್

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತರ ಪ್ರೇಮ ಪ್ರಕರಣದ ಮಧ್ಯೆ ಬಾಲಕನ ತಂದೆಯ ನಿಗೂಢ ಸಾವು ಸಂಭವಿಸಿದ್ದು, ಈ ಬಗ್ಗೆ ಪೊಲೀಸ್ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.

52ರ ಹರೆಯದ ವ್ಯಕ್ತಿ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ವಾಪಸಾದ ಬಳಿಕ ನಿರ್ಮಾಣ ವಲಯದಲ್ಲಿ ತೊಡಗಿಸಿಕೊಂಡಿದ್ದರು. ಎರಡು ವಾರದ ಹಿಂದೆ ವ್ಯಕ್ತಿ ಮನೆಯಲ್ಲಿ ಕುಸಿದು ಬಿದ್ದಿದ್ದು, ಅವರನ್ನು ಕಾಞಂಗಾಡಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದಗ ವೈದ್ಯರು ಸಾವು ಖಚಿತಪಡಿಸಿದ್ದರು. ಆದರೆ, ಪೊಲೀಸ್ ಠಾಣೆಗೆ ಮಾಹಿತಿ ನೀಡದೆ, ಅಂತ್ಯಸಂಸ್ಕಾರ ನಡೆಸಲಾಗಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ವ್ಯಕ್ತಿ ಮೃತಪಟ್ಟ ದಿನ ಮನೆಯಲ್ಲಿ ಹೊಡೆದಾಟವೂ ನಡೆದಿತ್ತೆನ್ನಲಾಗಿದೆ.

ಮೃತಪಟ್ಟ ವ್ಯಕ್ತಿಯ 17ರ ಹರೆಯದ ಪುತ್ರ ಹಾಗೂ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಪ್ರೇಮ ಹೊಂದಿದ್ದು, ಇದನ್ನು ವ್ಯಕ್ತಿ ಪ್ರಶ್ನಿಸಿರುವುದರಿಂದ ಪರಸ್ಪರ ಹೊಡೆದಾಟ, ಥಳಿತ ನಡೆದಿತ್ತೆನ್ನಲಾಗಿದೆ. ಸಾವಿನ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.