ಜಿಲ್ಲೆ

ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ

ಕೊಡಗು: ಇವರಿಬ್ಬರು ಮದುವೆಯಾಗಿದ್ದರೂ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದರು. ಅದಕ್ಕಾಗಿ ಮನೆಯನ್ನು ಬಿಟ್ಟು ಬಂದು ಒಟ್ಟಿಗೆ ವಾಸವಿದ್ದ ಇವರಿಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ.

ಹೀಗೆ ಸದ್ಯ ಆಸ್ಪತ್ರೆಯಲ್ಲಿ ಇರುವವರು ಪಿರಿಯಾಪಟ್ಟಣ ಚಿಕ್ಕನೇರಳೆ ಗ್ರಾಮದ ವಿದ್ಯಾ (29) ಮತ್ತು ಅದೇ ತಾಲೂಕಿನ ಕಣಗಾಲು ಗ್ರಾಮದ ವಿಶ್ವನಾಥ್ (35). ಇಬ್ಬರಿಗೂ ಬೇರೆ ವಿವಾಹವಾಗಿದ್ದು, ಇಬ್ಬಿಬ್ಬರು ಮಕ್ಕಳಿದ್ದಾರೆ.

ಪ್ರೀತಿಸುತ್ತಿದ್ದ ಇವರು ಮನೆ ಬಿಟ್ಟು ಬಂದಿದ್ದು ಕೊಡಗು ಜಿಲ್ಲೆಯ ಕುಶಾಲನಗರದ ಹೆಬ್ಬಾಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಒಂದು ತಿಂಗಳಿನಿಂದ ಇಲ್ಲಿ ವಾಸವಿದ್ದ ಇವರು ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವನಾಥ್​ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.