ಸುಳ್ಯ: ನಗರದ ರಥಬೀದಿಯ ಬಳಿ ಅಕ್ಕಿ ಸಾಮಾನು ಸರಬರಾಜು ಮಾಡುತ್ತಿದ್ದ ಲಾರಿಯೊಂದು ಹೂತು ಹೋಗಿದ್ದು, ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ತೆರವುಗೊಳಿಸಿದ ಘಟನೆ ಬುಧವಾರ ರಾತ್ರಿ ನಡೆಯಿತು. ಕುಡಿಯುವ ನೀರಿನ ಪೈಪ್ ಅಳವಡಿಕೆಗಾಗಿ ರಸ್ತೆ ಅಗೆದ ಭಾಗದಲ್ಲಿ ಲಾರಿಯ ಚಕ್ರ ಹೂತು ಹೋಗಿತ್ತು. ಸಂಜೆ 5ರ ಸುಮಾರಿಗೆ ಘಟನೆ ನಡೆದಿದ್ದು ಲಾರಿಯನ್ನು ತೆರವುಗೊಳಿಸಿದಾಗ ರಾತ್ರಿ ಎಂಟು ದಾಟಿತ್ತು. ಇದರಿಂದ ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಯಿತು.