ಶಿರಸಿ: ಜಮೀನು ನೋಂದಣಿಗೆ ಲಂಚ ಪಡೆಯುತ್ತಿದ್ದ ಶಿರಸಿ ಸಬ್ ರಿಜಿಸ್ಟ್ರಾರ್ ರಾಧಮ್ಮ ಎಂ.ವಿ.ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ನೇತೃತ್ವದಲ್ಲಿ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿದ್ದರು.
ದಾಸನಕೊಪ್ಪದ ಜಗಜ್ಯೋತಿ ವೀರಶೈವ ಸಮಿತಿಗೆ ವ್ಯಕ್ತಿಯೊಬ್ಬರು 3 ಗುಂಟೆ ಜಮೀನನ್ನು ದಾನ ನೀಡಿದ್ದು, ಅದನ್ನು ನೋಂದಣಿ ಮಾಡಲು ರಾಧಮ್ಮ ಲಂಚ ಕೇಳಿದ್ದರು. ದಾಸನಕೊಪ್ಪದ ಬಸವರಾಜ ನಂದಿಕೇಶ್ವರಮಠ ಅವರ ದೂರಿನ ಆಧಾರದ ಮೇಲೆ ರಾಧಮ್ಮ 3 ಸಾವಿರ ರೂ. ಲಂಚ ಪಡೆಯುತ್ತಿರುವಾಗ ಹಣದೊಂದಿಗೆ ಸಿಕ್ಕಿ ಬಿದ್ದ ರಾಧಮ್ಮ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕಾಡಾನೆಗಳಿಂದ ಅಡಕೆ, ಕಬ್ಬು, ಭತ್ತದ ಬೆಳೆ ನಾಶ