ಕಾಡಾನೆಗಳಿಂದ ಅಡಕೆ, ಕಬ್ಬು, ಭತ್ತದ ಬೆಳೆ ನಾಶ

Croploss
Published on

ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಸನಿಹದ ಗದ್ದೆಗಳಿಗೆ ಎರಡು ದಿನಗಳಿಂದ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಅಡಕೆ, ಕಬ್ಬು, ಭತ್ತದ ಬೆಳೆ ನಾಶಪಡಿಸಿವೆ.

ಬಡ್ಡಿಗೇರಿ ಗ್ರಾಮದ ಜಾನು ಕೊಕರೆ ಎಂಬುವರ ಭತ್ತದ ಬೆಳೆ, ಲಕ್ಷ್ಮಣ ತೋರವತ್ ಎಂಬುವರ ಅಡಕೆ ಗಿಡಗಳು, ಜಗ್ಗು ಕೊಕರೆ ಎಂಬುವರ ಕಬ್ಬು ಬೆಳೆ ತಿಂದು ತುಳಿದು ನಾಶಪಡಿಸಿವೆ. ಅಡಕೆ ಗಿಡಗಳನ್ನು ತುಳಿದು ಕಿತ್ತು ಹಾಕಿವೆ.

ಕತ್ತಲಾಗುತ್ತಿದ್ದಂತೆ ಕಾಡಿನಿಂದ ಗದ್ದೆಗಳತ್ತ ದಾಂಗುಡಿಯಿಡುವ ಕಾಡಾನೆಗಳು ಗದ್ದೆಯಲ್ಲಿನ ಬೆಳೆ ತಿಂದು ತುಳಿದು ನಾಶ ಪಡಿಸುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಡಾನೆಗಳು ಯಾವ ಸಮಯದಲ್ಲಿ ಕಾಡಿನಂಚಿನ ಗದ್ದೆ, ತೋಟಗಳಿಗೆ ದಾಳಿ ಮಾಡುತ್ತವೆಂಬ ಭಯದಲ್ಲಿಯೇ ರೈತರು ಕಾಲ ಕಳೆಯಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net