More

    ವಚನ ಸಾಹಿತ್ಯ ಕ್ರಿಯಾತ್ಮಕ ನಿಲುವುಗಳಿಗೆ ಸಾಕ್ಷಿ

    ರಾಯಚೂರು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ವಿಶಿಷ್ಠ ಸ್ಥಾನಮಾನ ಪಡೆದುಕೊಂಡಿರುವುದಕ್ಕೆ ಅದರ ತಾತ್ತ್ವಿಕ ಹಾಗೂ ಕ್ರಿಯಾತ್ಮಕ ನಿಲುವುಗಳಿಗೆ ಸಾಕ್ಷಿಯಾಗಿದೆ ಕಲಬುರಗಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಹೇಳಿದರು.
    ನಗರದ ಹೊರವಲಯದಲ್ಲಿನ ರಾಯಚೂರು ವಿವಿಯ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದಿಂದ ಮಂಗಳವಾರ ಏರ್ಪಡಿಸಿದ್ದ ವಚನಕಾರ್ತಿಯರು ಮತ್ತು ವೈಚಾರಿಕತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ಹೊಸ ಪರ್ವವನ್ನು ಸೃಷ್ಟಿಸುವುದರ ಜತೆಗೆ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನವನ್ನು ಉಂಟು ಮಾಡಿತು. ಆ ಮೂಲಕ ಮಾನವನ ಬದುಕಿನ ಪ್ರತಿಯೊಂದು ಸ್ತರದಲ್ಲಿ ಬದಲಾವಣೆಗಳನ್ನು ತಂದಿತ್ತು.
    ಅಕ್ಕಮಹಾದೇವಿ ಸೀಪರ ಹೋರಾಟಕ್ಕೆ ಭದ್ರ ಬುನಾದಿ ಹಾಕಿದರು. ಅವರ ಬದುಕೇ ಬಂಡಾಯವಾಗಿದ್ದು, ಸಮಾಜದ ಕಟ್ಟಳೆಗಳನ್ನು ಮೀರಿ ಬದುಕಿದಳು. ವಚನಕಾರ್ತಿಯರು ಸಮಕಾಲೀನ ಸಮಾಜದ ಪ್ರತಿಯೊಂದು ಸಂದರ್ಭ, ವ್ಯವಸ್ಥೆ, ಸ್ಥಿತಿಗತಿಯನ್ನು ತಮ್ಮ ವಚನಗಳಲ್ಲಿ ಟೀಕೆ, ಟಿಪ್ಪಣೆ ಮಾಡಿದ್ದಾರೆ ಎಂದು ಹೇಳಿದರು.
    ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ್ ಮಾತನಾಡಿ, ವಚನ ಸಾಹಿತ್ಯ ಮಹಿಳಾ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು. 33 ವಚನಕಾರ್ತಿಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಶೋಷಣೆ, ದೌರ್ಜನ್ಯ, ಅನಾದರಕ್ಕೆ ಒಳಗಾಗುತ್ತಾ ಬಂದಿದ್ದ ಮಹಿಳೆಯರು 12ನೇ ಶತಮಾನದಲ್ಲಿ ಪುರುಷರಿಗೆ ಸರಿಸಮನಾಗಿ ಬದುಕಿದರು ಎಂದು ತಿಳಿಸಿದರು.
    ವಿವಿ ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರ‌್ರಿಸ್ವಾಮಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಸಾಹಿತ್ಯದ ಓದು, ರಚನೆ ಬಗ್ಗೆ ಯುವಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್ ಮಾಯೆಗೆ ಒಳಗಾಗಿ ಓದು ಬರಹವನ್ನು ಮರೆಯುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್‌ನ್ನು ಸಾಹಿತ್ಯದ ಓದು ಮತ್ತು ಪ್ರಸರಣೆಗೆ ಬಳಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
    ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶರಣಪ್ಪ ಚಲುವಾದಿ, ಪ್ರಾಧ್ಯಾಪಕರಾದ ಪ್ರೊ.ಪಿ.ಭಾಸ್ಕರ್, ಡಾ.ಶಿವಲೀಲಾ, ಅನಿಲ್ ಅಪ್ರಾಳ್, ವಿಜಯ ಸರೋದೆ, ಡಾ.ಶಾಂತಾದೇವಿ ಪಾಟೀಲ್, ಡಾ.ಮೇಘನಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts