More

    ಮೊಸಳೆಕೊಪ್ಪಲು ಗ್ರಾಮಸ್ಥರಿಂದ ಕಪ್ಪೆ ಹಬ್ಬ

    ಕೆ.ಆರ್.ಪೇಟೆ: ತಾಲೂಕಿನಾದ್ಯಂತ ಮಳೆಯಿಲ್ಲದೆ ಕುಡಿಯುವ ನೀರಿಗೂ ತಾತ್ವಾರ ಎದುರಾಗಿರುವ ಹಿನ್ನೆಲೆಯಲ್ಲಿ ಬೂಕನಕೆರೆ ಹೋಬಳಿಯ ಮೊಸಳೆಕೊಪ್ಪಲು ಗ್ರಾಮಸ್ಥರು ಮಳೆಗಾಗಿ ಕಪ್ಪೆ ಹಬ್ಬ ಆಚರಿಸಿದರು.

    ವಾಡಿಕೆಯಂತೆ ಮಳೆ ಬಾರದಿದ್ದಾಗ ಕಪ್ಪೆ ಹಬ್ಬ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಈ ಬಾರಿಯೂ ಗ್ರಾಮದ ಹಿರಿಯರು, ಕಿರಿಯರು ಒಂದೆಡೆ ಸೇರಿ ಮಳೆಯ ಅಗತ್ಯತೆ ಬಗ್ಗೆ ಚರ್ಚಿಸಿ ವರುಣ ದೇವನನ್ನು ಪ್ರಾರ್ಥಿಸಲು ಕಪ್ಪೆ ಹಬ್ಬ ಆಚರಿಸಿದರು. ಕಪ್ಪೆಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದ ಹೊರವಲಯದ ಕೆರೆಯ ಅಂಗಳದಲ್ಲಿ ಪೂಜಿಸಿ ಪ್ರಸಾದ ವಿತರಣೆ ಮೂಲಕ ವರುಣ ದೇವನಿಗೆ ಪ್ರಾರ್ಥನೆ ಸಲ್ಲಿಸಿದರು.

    ಗ್ರಾಮಸ್ಥರಾದ ಕೃಷ್ಣಗೌಡ, ಎಂ.ಡಿ ಕಾಂತರಾಜು, ಕೇಬಲ್ ಅಶೋಕ್, ಎಂ.ಆರ್.ಸುರೇಶ್, ಅಣ್ಣೇಗೌಡ, ವಿಜಯ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts