ಜಿಲ್ಲೆ

ನಯೋಪ್ರಾ ಸದಸ್ಯ ಕಾರ್ಯದರ್ಶಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಸಿಂಧನೂರು: ಸ್ಥಳೀಯ ನಗರ ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರಣಪ್ಪ ಮಡಿವಾಳ ನಿವಾಸ ಹಾಗೂ ಪ್ರಾಧಿಕಾರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿ ಅಗತ್ಯ ದಾಖಲಾತಿಗಳನ್ನು ಕಲೆ ಹಾಕಿದರು.


ಆದಾಯ ಮೀರಿ ಗಳಿಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿ ಧ್ರುವತಾರಾ ನೇತೃತ್ವದ 6 ಅಧಿಕಾರಿಗಳನ್ನೊಳಗೊಂಡ ತಂಡವು ನಗರ ಯೋಜನಾ ಪ್ರಾಧಿಕಾರದ ಕಚೇರಿ ಮೇಲೆ ಬೆಳಗ್ಗೆ 9ಕ್ಕೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿತು.

ಶರಣಪ್ಪ ಮಡಿವಾಳ

9 ಅಧಿಕಾರಿಗಳ ತಂಡ ಹಣ, ಆಸ್ತಿ ಪತ್ರಗಳನ್ನು ಪರಿಶೀಲಿಸಿತು

ಇನ್ನೊಂದೆಡೆ ಲೋಕಾಯುಕ್ತ ಪೊಲೀಸ್ ಬಾಬಾಸಾಹೇಬ್ ಪಟೇಲ್ ನೇತೃತ್ವದ 9 ಅಧಿಕಾರಿಗಳ ತಂಡವು ಶರಣಪ್ಪ ಮಡಿವಾಳ ವಾಸವಿದ್ದ ಆದರ್ಶ ಕಾಲನಿಯ ಧರ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಿ ಹಣ, ಒಡುವೆ, ಬೆಳ್ಳಿ, ಆಸ್ತಿ ಪತ್ರಗಳನ್ನು ಪರಿಶೀಲಿಸಿತು. ಎರಡೂ ಕಡೆ ಶೋಧ ಕಾರ್ಯ ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಲು ನಿರಾಕಾರಿಸಿದರು.