ಜಿಲ್ಲೆ

ನಂಜನಗೂಡು ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್; ಪ್ರೆಯಸಿಗಾಗಿ ಜಗಳ ಮಾಡಿಕೊಂಡವ ಜೈಲಲ್ಲಿ ಸಾವು

ಮೈಸೂರು: ಪ್ರೇಯಸಿಗಾಗಿ ಜಗಳ ಮಾಡಿಕೊಂಡು ಬಂಧಿತನಾಗಿದ್ದವ ಜೈಲಲ್ಲಿ ಸಾವಿಗೀಡಾಗಿದ್ದಾನೆ. ಈ ಮೂಲಕ ನಂಜನಗೂಡು ಗ್ರಾಮಾಂತರ ‌ಪೊಲೀಸ್ ಠಾಣೆ ಲಾಕಪ್ ಡೆತ್ ಆರೋಪಕ್ಕೆ ಗುರಿಯಾದಂತಾಗಿದೆ. ನಂಜನಗೂಡು ತಾಲೂಕಿನ ಬ್ಯಾಳಾರುಹುಂಡಿ ನಿವಾಸಿ ಸಿದ್ದರಾಜು (31) ಲಾಕಪ್ ಡೆತ್‌ಗೆ ಒಳಗಾಗಿರುವ ವ್ಯಕ್ತಿ.

ಸಿದ್ದರಾಜು ಪಾನಮತ್ತನಾಗಿ ಪ್ರೇಯಸಿಯ ಮನೆ ಬಾಗಿಲಿಗೆ ಹೋಗಿ, ಇನ್ನೊಬ್ಬ ವ್ಯಕ್ತಿ ಜೊತೆ ಗಲಾಟೆ ಮಾಡಿಕೊಂಡಿದ್ದ‌. ಈ ಸಂಬಂಧ ಸಿದ್ದರಾಜುವನ್ನು ವಶಕ್ಕೆ ಪಡೆದ ಪೊಲೀಸರು, ಅನೈತಿಕ ಸಂಬಂಧ ಆರೋಪದ ಮೇರೆಗೆ ಠಾಣೆಗೆ ಕರೆದುಕೊಂಡು ಬಂದಿದ್ದರು.

ಸಿದ್ದರಾಜುವನ್ನು ಪೊಲೀಸರು ಎಫ್‌ಐಆರ್‌ ದಾಖಲಿಸದೆ ಠಾಣೆಯಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದ್ದು, ಆತ ಪೊಲೀಸರ ವಶದಲ್ಲಿ ಇರುವಾಗ ಸಾವಿಗೀಡಾಗಿದ್ದಾನೆ. ಆತ ಸಾವಿಗೀಡಾಗುತ್ತಿದ್ದಂತೆ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ಸಿದ್ದರಾಜು ಠಾಣೆಯಲ್ಲಿ ಸತ್ತಿದ್ದು, ಇದು ಲಾಕಪ್ ಡೆತ್ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಹೀಗಾಗಿ ಆಸ್ಪತ್ರೆ ಮುಂದೆ ಬಿಗು ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಎಸ್‌ಪಿ ಆರ್.ಚೇತನ್, ಎಎಸ್‌ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.