ಹಗರಿಬೊಮ್ಮನಹಳ್ಳಿ ಸರ್ಕಾರಿ ಗಂಗಾವತಿ ಭೀಮಪ್ಪನವರ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಕೆ.ನೇಮಿರಾಜ ನಾಯ್ಕ ಚಾಲನೆ ನೀಡಿದರು. ಬಿಇಒ ಮೈಲೇಶ್ ಬೇವೂರ್, ಪುರಸಭೆ ಸದಸ್ಯ ದೀಪಕ್ ಸಾ ಕಠಾರೆ, ವರ್ತಕರ ಸಂಘದ ತಾಲೂಕು ಅಧ್ಯಕ್ಷ ಮೃತ್ಯುಂಜಯ ಬದಾಮಿ, ಕನ್ನಿಹಳ್ಳಿ ಚಂದ್ರಶೇಖರ್ ಪಾಲ್ಗೊಂಡಿದ್ದರು. 
ಜಿಲ್ಲೆ

ನಿತ್ಯ ಬದುಕಿಗೆ ಅಳವಡಿಸಿಕೊಳ್ಳಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ವಿಶ್ವವೇ ಯೋಗದಲ್ಲಿ ತೊಡಗಿಕೊಳ್ಳುತ್ತಿದೆ ಮತ್ತು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದರೆ ಅದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಗದರ್ಶನದಿಂದ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ಸರ್ಕಾರಿ ಗಂಗಾವತಿ ಭೀಮಪ್ಪನವರ ತಾಲೂಕು ಕ್ರೀಡಾಂಗಣದಲ್ಲಿ, ರಾಜ್ಯ ದೈಹಿಕ ಶಿಕ್ಷಕರ ಸಂಘ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಂಸ್ಕೃತಿಯಲ್ಲಿ ಯೋಗವೂ ಒಂದು, ಇತಿಹಾಸವನ್ನು ಹೊಂದಿರುವ ಇದಕ್ಕೆ ಜೀವ ಕಳೆ ತುಂಬಿದ್ದು, ಮೋದಿಜೀಯವರು. ಈ ಯೋಗದಿಂದ ಸಾಕಷ್ಟು ಅನುಕೂಲತೆಗಳಿದ್ದು, ಯೋಗದಲ್ಲಿ ನಿರತರಾದವರು ಕಾಯಿಲೆಗಳಿಂದ ಮುಕ್ತರಾಗಿರುತ್ತಾರೆ.

ಒಂದೇ ದಿನಕ್ಕೆ ಸೀಮಿತಗೊಳ್ಳದೆ, ನಿತ್ಯ ಜೀವನದಲ್ಲಿ ಪರಿಪಾಠವಾಗಿರಬೇಕು. ಮುಂದಿನ ವರ್ಷ ಈ ದಿನವನ್ನು ತಾಲೂಕು ಆಡಳಿತದಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಿ, ಇದೇ ಕ್ರೀಡಾಂಗಣದಲ್ಲಿ ಏರ್ಪಡಿಸೋಣ ಎಂದರು.

ಸೊನ್ನ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಬಿ.ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಸ ಜರುಗಿತು.

ಪುರಸಭೆ ಸದಸ್ಯ ದೀಪಕ್‌ಸಾ ಕಠಾರೆ, ವರ್ತಕರ ಸಂಘದ ತಾಲೂಕು ಅಧ್ಯಕ್ಷ ಮೃತ್ಯುಂಜಯ ಬದಾಮಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ, ಬಿಸಿಯೂಟ ಅಧಿಕಾರಿ ರಾಜಕುಮಾರನಾಯ್ಕ, ದೈಹಿಕ ಶಿಕ್ಷಣಾಧಿಕಾರಿ ಸೋಮಪ್ಪ ಇತರರಿದ್ದರು.

ಯೋಗಾಭ್ಯಾಸ ಮಾಡಿಸಿದ ದೈಹಿಕ ಶಿಕ್ಷಕ ಬಿ.ವಿಶ್ವನಾಥ ಮತ್ತು ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಬಿಇಒ ಮೈಲೇಶ್ ಬೇವೂರ್ ಅವರಿಗೆ ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.