ಜಿಲ್ಲೆ

ಸ್ವ ಉದ್ಯೋಗದಿಂದ ಸ್ವಾವಲಂಬನೆಯ ಬದುಕು

Avinash R

ಪುತ್ತೂರು ಗ್ರಾಮಾಂತರ: ಸ್ವಉದ್ಯೋಗ ಮಾಡುವುದರಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ ಹೇಳಿದರು.

ನರಿಮೊಗರು ಗ್ರಾಪಂನಲ್ಲಿ ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಎನ್‌ಆರ್‌ಎಲ್‌ಎಂ ತಾಲೂಕು ಅಭಿಯಾನ ನಿರ್ವಹಣಾ ಘಟಕ ಪುತ್ತೂರು, ನರಿಮೊಗರು ಗ್ರಾಪಂ ಮತ್ತು ನರಿಮೊಗರು ಶ್ರೀ ದುರ್ಗಾ ಸಂಜೀವಿನಿ ಗ್ರಾಪಂಮಟ್ಟದ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಟೈಲರಿಂಗ್ ತರಬೇತಿ ಸಮಾರೋಪದಲ್ಲಿ ಮಂಗಳವಾರ ಮಾತನಾಡಿದರು.

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ಜೀವನ್ ಕೊಲ್ಯ, ನರಿಮೊಗರು ಪಿಡಿಒ ರವಿಚಂದ್ರ ಯು ಮಾಹಿತಿ ನೀಡಿದರು. ಟೈಲರಿಂಗ್ ತರಬೇತಿ ನೀಡಿದ ಪ್ರೀತಿ ಆಚಾರ್ಯ ಅವರನ್ನು ಶಿಬಿರಾರ್ಥಿಗಳು ಗೌರವಿಸಿದರು.

ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಹರಿಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಸುಧಾಕರ ಕುಲಾಲ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಕೃಷಿಯೇತರ ಚಟುವಟಿಕೆ ತಾಲೂಕು ವ್ಯವಸ್ಥಾಪಕಿ ನಳಿನಿ ಉಪಸ್ಥಿತರಿದ್ದರು. ಅನುರಾಧಾ ಪ್ರಭು ಸ್ವಾಗತಿಸಿದರು. ಬೇಬಿ ವಂದಿಸಿದರು. ಸುನಿತಾ ಕಾರ್ಯಕ್ರಮ ನಿರೂಪಿಸಿದರು.