ಕಸಾಪ ಬ್ರಹ್ಮಾವರ ಘಟಕ ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಮಾತನಾಡಿದರು.  
ಜಿಲ್ಲೆ

ಬಾಳ್ಕುದ್ರು ಶಾಲೆಯಲ್ಲಿ ಸಾಹಿತ್ಯ ಸಂಚಾರ ಸರಣಿ

ಕೋಟ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ ಸಾಹಿತ್ಯ ಸಂಚಾರ 45 ಕಾರ್ಯಕ್ರಮ ಬಾಳ್ಕುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಸಾಪ ಬ್ರಹ್ಮಾವರ ಘಟಕ ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಅಧ್ಯಕ್ಷತೆ ವಹಿಸಿದ್ದರು. ನೀಲಾವರ ಸುರೇಂದ್ರ ಅಡಿಗ, ನಾಗೇಶ ಮಯ್ಯ, ನರಸಿಂಹ ತುಂಗ, ಅಚ್ಚುತ ಪೂಜಾರಿ, ಮೀನ ಕಾರಂತ, ಸುಜಯೀಂದ್ರ ಹಂದೆ, ವಿಶ್ವನಾಥ ಖಾರ್ವಿ, ನರಸಿಂಹಮೂರ್ತಿ ಚಟುವಟಿಕೆ ಆಧಾರಿತ ಕಥೆ, ಕವನ ರಚಿಸಿ ಹಾಡಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಕುಸುಮಾ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕಾಂತ್ ಸಾಮಂತ್ ಉಪಸ್ಥಿತರಿದ್ದರು.