ಏರ್ಯಬೀಡುವಿನಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟವನ್ನು ಏರ್ಯಬೀಡು ಆನಂದಿ ಎಲ್. ಆಳ್ವ ಉದ್ಘಾಟಿಸಿದರು 
ಜಿಲ್ಲೆ

ವ್ಯಕ್ತಿತ್ವದಲ್ಲಿ ಕಪ್ಪುಚುಕ್ಕೆ ಇಲ್ಲದ ಏರ್ಯ: ಡಾ.ತುಕರಾಂ ಪೂಜಾರಿ ಬಣ್ಣನೆ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ

ಇಂದಿರಾ ಎನ್ ಕೆ

ಬಂಟ್ವಾಳ: ಏರ್ಯ ಲಕ್ಷ್ಮೀನಾರಾಯಣ ಆಳ್ವರು ಎಂದಿಗೂ ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಅಂಟಿಸಿಕೊಂಡವರಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೂ ಕಳಂಕರಹಿತವಾಗಿ ಬದುಕಿರುವುದು ಅವರ ಯೋಗ್ಯತೆಗೆ ಸಂದ ಗೌರವ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಹೇಳಿದರು.

ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಆಶ್ರಯದಲ್ಲಿ ಏರ್ಯಬೀಡುವಿನಲ್ಲಿ ಭಾನುವಾರ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟದಲ್ಲಿ ಮಾತನಾಡಿದರು. ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಮಾತನಾಡಿದರು. ಏರ್ಯಬೀಡುವಿನ ಆನಂದಿ ಎಲ್.ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಏರ್ಯಬೀಡುವಿನ ರಾಜರಾಂ ರೈ, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ, ಹೊಟೇಲ್ ಉದ್ಯಮಿ ಚಂದ್ರಹಾಸ ಶೆಟ್ಟಿ, ಅಮ್ಟಾಡಿ ಗ್ರಾಪಂ ಅಧ್ಯಕ್ಷ ವಿಜಯ್ ಕುಮಾರ್ ಉಪಸ್ಥಿತರಿದ್ದರು.

ಏರ್ಯರ ನೆನಪು ಮತ್ತು ಓದುವ ಹವ್ಯಾಸದ ಬಗ್ಗೆ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಕಥೆ ರಚನೆ ಬಗ್ಗೆ ತುಳಸಿ ಕೈರಂಗಳ, ಕವಿತೆ ರಚನೆ ಬಗ್ಗೆ ಜಯರಾಮ ಪಡ್ರೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ದಾಮೋರ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು. ಕೇಶವ ಎಚ್.ಕಟೀಲು ನಿರೂಪಿಸಿದರು.