ಕೊಕ್ಕರ್ಣೆ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಕೊಕ್ಕರ್ಣೆಯಲ್ಲಿ ಸಾಹಿತ್ಯ ಪ್ರೇರಣೆ ಜರುಗಿತು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕಾರ್ಕಡ ಅಚ್ಯುತ ಪೂಜಾರಿ, ಯಕ್ಷಗಾನ ಗುರು ನರಸಿಂಹ ತುಂಗ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಹಾಡು, ಕವನ ರಚನೆ, ಕಥೆ, ಪ್ರಾಸ ಪದಗಳ ಜೋಡಣೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ಉದಯ ನಾಯಕ್, ಸಿಆರ್‌ಪಿ ಪ್ರತಿಭಾ ಉಪಸ್ಥಿತರಿದ್ದರು. ಗುಲಾಬಿ ಸ್ವಾಗತಿಸಿದರು. ಆಶಾಕಿರಣ ವಂದಿಸಿದರು. ಭಾಸ್ಕರ ಪೂಜಾರಿ ನಿರೂಪಿಸಿದರು.