ಕೋಟ: ಸಾಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಶನಿವಾರ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ರಾಮಚಂದ್ರ ಐತಾಳ ಪ್ರಾಸಬದ್ಧ ಕಿರು ಕವನ, ಮೌಲ್ಯಯುತವಾದ ಕಥೆ ಹೇಳಿ ಮಕ್ಕಳನ್ನು ರಂಜಿಸಿದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಥೆ ಕವನ ರಚನೆ ಮಾಡಿದರು. ಸಾಹಿತ್ಯ ಪರಿಷತ್ ಅಚ್ಚುತ ಪೂಜಾರಿ ಕಾರ್ಕಡ, ಬಾಗೇಶ್ವರಿ ಮಯ್ಯ ವಚನ, ಪದ್ಯಗಳನ್ನು ಹಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತ ವೆಂಕಟೇಶ್, ದಾನಿಗಳಾದ ಹೆಂಚಿನ ಮನೆ ಹೊಳ್ಳ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೃಷ್ಣ ಮಾಸ್ಟರ್ ಸ್ವಾಗತಿಸಿದರು. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಬಾಳಪ್ಪ ಧನ್ಯವಾದಗೈದರು.