ಬಂಟ್ವಾಳ: ತಾಲೂಕಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಶಂಭೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಆಯ್ದ ಸಾಹಿತ್ಯಾಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಬಂಟ್ವಾಳ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ಮಂಗಳವಾರ ನಡೆಸಲಾಯಿತು.
ಬೊಂಡಾಲ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಕೌಶಿಕ್ ಶೆಟ್ಟಿ ಕವನ ವಾಚಿಸಿ ಕಮ್ಮಟವನ್ನು ಉದ್ಘಾಟಿಸಿದರು. ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯವು ಬದುಕು ಕಟ್ಟಲು ಸಹಾಯಕ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಸ್ಕರ ಅಡ್ವಾಳ, ರಮೇಶ ಎಂ.ಬಾಯಾರು, ಪುಷ್ಪಾ ಎಚ್ ವಿಟ್ಲ ಭಾಗವಹಿಸಿದ್ದರು. ಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ 32 ವಿದ್ಯಾರ್ಥಿಗಳು ಭಾಗವಹಿಸಿದರು. ಅಪರಾಹ್ನ ಜರುಗಿದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸ್ವರಚನೆಗಳ ಹಸ್ತಪತ್ರಿಕೆಯನ್ನು ಶಂಭೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಅನಾವರಣಗೊಳಿಸಿದರು.
ರಮೇಶ ಎಂ.ಬಾಯಾರು, ಭಾಸ್ಕರ ಅಡ್ವಾಳ, ಪುಷ್ಪಾ ಎಚ್. ಅವರನ್ನು ಶಂಭೂರು ಪ್ರೌಢಶಾಲಾ ವತಿಯಿಂದ ಗೌರವಿಸಲಾಯಿತು. ಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ.ಸತೀಶ್ ರಾವ್, ಶಂಭೂರು ಸ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಜಯರಾಮ ಪಡ್ರೆ ಉಪಸ್ಥಿತರಿದ್ದರು. ಸಹ ಶಿಕ್ಷಕ ದೇವದಾಸ್ ಕೆ, ನರಿಕೊಂಬು ಶಾಲಾ ಮುಖ್ಯಶಿಕ್ಷಕಿ ಸುಜಾತ ಕುಮಾರಿ ಸಹಕರಿಸಿದರು.