ಜಿಲ್ಲೆ

ಕರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಬೆಂಗಳೂರಿನ ಆಸ್ಪತ್ರೆಗಳಿವು..

ಬೆಂಗಳೂರು: ಚೀನಾ ಮೂಲದ ಕರೊನಾ ವೈರಸ್​ ವಿಶ್ವವ್ಯಾಪಿಯಾಗುತ್ತಿದೆ. ಕರ್ನಾಟಕಕ್ಕೂ ಸಹ ಕರೊನಾ ಬಿಸಿ ಮುಟ್ಟಿದ್ದು, ರಾಜ್ಯದ ಜನ ಮನೆಯಿಂದ ಹೊರ ಬರುವುದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸ್​ನ ಬಗ್ಗೆ ಭಯ ಬೇಡ ಆದರೆ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ ಎಂದು ಸರ್ಕಾರ ಜನರಿಗೆ ತಿಳಿಸಿದೆ.

ಪ್ರತಿ ರಾಜ್ಯಗಳಲ್ಲಿಯೂ ಕರೊನಾ ವೈರಸ್​ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಆ ಆಸ್ಪತ್ರೆಗಳ ಹೊರೆತಾಗಿ ಬೇರೆ ಆಸ್ಪತ್ರೆಗಳಲ್ಲಿ ನಿಮಗೆ ಚಿಕಿತ್ಸೆ ಲಭ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ ನಾಲ್ಕು ಆಸ್ಪತ್ರೆಗಳನ್ನು ಕರೊನಾ ಚಿಕಿತ್ಸೆಗೆ ಗುರುತಿಸಲಾಗಿದ್ದು ಅದರ ಮಾಹಿತಿ ಇಲ್ಲಿದೆ.

1) ರಾಜೀವ್​ ಗಾಂಧಿ ಇನ್ಸ್ಟಿಟ್ಯೂಟ್​ ಆಫ್​ ಚೆಸ್ಟ್​ ಡಿಸೀಸಸ್​ (RGICD)

ವಿಳಾಸ: ಸೋಮೇಶ್ವರನಗರ 1ನೇ ರಸ್ತೆ, ಧರ್ಮರಾಮ್ ಕಾಲೇಜು ಪೋಸ್ಟ್, 1ನೇ ಬ್ಲಾಕ್, ಹೊಂಬೆಗೌಡ ನಗರ, ಬೆಂಗಳೂರು, ಕರ್ನಾಟಕ 560029

ದೂರವಾಣಿ ಸಂಖ್ಯೆ: 080 26088500

2) ಮಣಿಪಾಲ್​ ಆಸ್ಪತ್ರೆ

ವಿಳಾಸ: 98, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು, ಕರ್ನಾಟಕ 560017.

ದೂರವಾಣಿ ಸಂಖ್ಯೆ: 080-25211200

3) ನಾರಾಯಣ ಹೆಲ್ತ್​

ವಿಳಾಸ: 258 / A, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಅನೆಕಲ್ ತಾಲ್ಲೂಕು, ಹೊಸೂರು ರಸ್ತೆ, ಬೆಂಗಳೂರು, ಕರ್ನಾಟಕ 560099

ದೂರವಾಣಿ ಸಂಖ್ಯೆ: 080 675 06870

4) ಫೋರ್ಟಿಸ್​ ಆಸ್ಪತ್ರೆ

ವಿಳಾಸ: 154, 9, ಬನ್ನೇರುಘಟ್ಟ ಮುಖ್ಯ ರಸ್ತೆ, ಐಐಎಂ ಎದುರು, ಸಹ್ಯಾದ್ರಿ ಲೇಔಟ್, ಪಾಂಡುರಂಗ ನಗರ, ಬೆಂಗಳೂರು, ಕರ್ನಾಟಕ 560076

ದೂರವಾಣಿ ಸಂಖ್ಯೆ: 080-66214444