ಜಿಲ್ಲೆ

10 ಗಂಟೆ ನಂತರ ಅರ್ಧ ಶಟರ್ ಮುಚ್ಚಿ ವ್ಯಾಪಾರ ! ಪೊಲೀಸರಿಂದ ಸೀಲ್‌ಡೌನ್

rashmirhebbur

ಬೆಂಗಳೂರು : ಕೋವಿಡ್‌ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಲಿಕ್ಕರ್​ ಶಾಪ್​ಗಳನ್ನು ಬೆಂಗಳೂರು ಪೊಲೀಸರು ಸೀಲ್​ ಮಾಡಿದ್ದಾರೆ. ಬೆಳಿಗ್ಗೆ ೧೦ ಗಂಟೆ ಬಳಿಕವೂ ಅರ್ಧ ಶಟರ್ ಮುಚ್ಚಿ ಖುಲ್ಲಂ ಖುಲ್ಲಾ ಮದ್ಯ ಮಾರಾಟ ಮಾಡುತ್ತಿದ್ದ ಮಾಲೀಕರ ಮೇಲೆ ಕೇಸು ದಾಖಲಿಸಲಾಗಿದೆ.

ಸೋಲದೇವನಹಳ್ಳಿಯ ಶಿಲ್ಪಾ ಲಿಕ್ಕರ್ ಶಾಪ್ ಮತ್ತು ಗಂಗಮ್ಮನಗುಡಿಯ ಸಪ್ತಗಿರಿ‌ ಲಿಕ್ಕರ್ ಶಾಪ್ ಈ ರೀತಿ ಲಾಕ್​ಡೌನ್ ನಿಯಮ ಉಲ್ಲಂಘಿಸಿ ಸಿಕ್ಕುಬಿದ್ದಿರುವ ಮಳಿಗೆಗಳು. ಈ ಮಳಿಗೆಗಳನ್ನು ಪೊಲೀಸರು ಸೀಲ್ ಡೌನ್ ಮಾಡಿದ್ದಾರೆ. ಈ ಎರಡು ಲಿಕ್ಕರ್ ಶಾಪ್ ಮಾಲೀಕರ ವಿರುದ್ಧ ಸೋಲದೇವನಹಳ್ಳಿ ಮತ್ತು ಗಂಗಮ್ಮನಗುಡಿ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿದೆ.