More

    ರಸ್ತೆ ಬದಿ ಅನಾಥವಾಗಿ ಸಿಕ್ಕಿತು ಕರೊನಾ ಲಸಿಕೆ ತುಂಬಿದ ಟ್ರಕ್​ !

    ಭೋಪಾಲ್ : ಸಾಕಷ್ಟು ಲಸಿಕೆಗಳ ಪೂರೈಕೆಯಾಗಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಇಂದು ಆರಂಭವಾಗಬೇಕಿದ್ದ 18 ವರ್ಷ ಮೇಲ್ಪಟ್ಟವರ ಕರೊನಾ ಲಸಿಕಾ ಅಭಿಯಾನವನ್ನು ಮುಂದೂಡಿದೆ. ಆದರೆ, ಸುಮಾರು ಎರಡೂವರೆ ಲಕ್ಷ ಡೋಸ್​ ಕೋವಾಕ್ಸಿನ್ ಲಸಿಕೆಯನ್ನು ಸಾಗಿಸುತ್ತಿದ್ದ ಟ್ರಕ್​ ಒಂದು ರಾಜ್ಯದ ಪಟ್ಟಣವೊಂದರಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಸಿಕ್ಕಿರುವುದು ವರದಿಯಾಗಿದೆ.

    ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಕರೇಲಿ ಬಸ್​ ನಿಲ್ದಾಣದ ಬಳಿ ಬಹಳಷ್ಟು ಸಮಯದಿಂದ ರಸ್ತೆಯ ಬದಿಯಲ್ಲಿ ಯಾರೋ ಟ್ರಕ್​ ಒಂದನ್ನು ಬಿಟ್ಟು ಹೋಗಿದ್ದಾರೆ. ಅದರ ಚಾಲಕ ಅಥವಾ ಕ್ಲೀನರ್​ ಸ್ಥಳದಲ್ಲಿ ಎಲ್ಲೂ ಕಾಣುತ್ತಿಲ್ಲ ಎಂದು ಕರೇಲಿ ಪೊಲೀಸರಿಗೆ ಇಂದು ಬೆಳಿಗ್ಗೆ ಮಾಹಿತಿ ಬಂದಿದೆ. ಸ್ಥಳ ತಲುಪಿದ ಪೊಲೀಸರು ಟ್ರಕ್​ಅನ್ನು ಪರಿಶೀಲಿಸಿದಾಗ ಅದರಲ್ಲಿ ಭಾರತ್​ ಬಯೋಟೆಕ್​​ ಕಂಪೆನಿಯ ಕೋವಾಕ್ಸಿನ್ ಲಸಿಕೆಗಳ 2,40,000 ಡೋಸ್​​ಗಳ ದಾ​​ಸ್ತಾನು ಕಂಡು ಆಶ್ಚರ್ಯಗೊಂಡಿದ್ದಾರೆ.

    ಇದನ್ನೂ ಓದಿ: ಉಗ್ರರಿಂದ ಟ್ರಕ್‌ ಬಾಂಬ್‌ ದಾಳಿ-ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದ 21 ವಿದ್ಯಾರ್ಥಿಗಳ ದುರಂತ ಅಂತ್ಯ

    “ಈ ಲಸಿಕೆಗಳ ಬೆಲೆ ಸುಮಾರು 8 ಕೋಟಿ ರೂ.ಗಳಿರಬಹುದು. ಡ್ರೈವರ್​ನ ಮೊಬೈಲ್ ನಂಬರನ್ನು ಟ್ರೇಸ್​ ಮಾಡಿದಾಗ ಅದು ಹೆದ್ದಾರಿ ಬಳಿಯ ಪೊದೆಗಳಲ್ಲಿ ಸಿಕ್ಕಿತು. ನಾವು ಡ್ರೈವರ್ ಮತ್ತು ಕಂಡಕ್ಟರ್​ಅನ್ನು ಹುಡುಕುತ್ತಿದ್ದೇವೆ. ಆದರೆ ಸದ್ಯಕ್ಕೆ ಅವರು ನಾಪತ್ತೆಯಾಗಿದ್ದಾರೆ. ಟ್ರಕ್​ನ ಏರ್ ಕಂಡೀಷನ್ ಕೆಲಸ ಮಾಡುತ್ತಿತ್ತು. ಆದ್ದರಿಂದ ಲಸಿಕೆಯ ಡೋಸ್​​ಗಳು ಸುರಕ್ಷಿತವಾಗಿವೆ ಎಂದು ಭಾವಿಸಿದ್ದೇವೆ” ಎಂದು ಸಬ್​ಇನ್ಸ್​​ಪೆಕ್ಟರ್ ಆಶೀಶ್ ಬೊಪಾಚೆ ಹೇಳಿದ್ದಾರೆ. ತನಿಖೆ ಮುಂದುವರೆದಿದೆ. (ಏಜೆನ್ಸೀಸ್)

    ಕೆಲವು ವಾರ ಇಡೀ ದೇಶ ಬಂದ್​ ಮಾಡಿ ಎನ್ನುತ್ತಾರೆ ಅಮೆರಿಕದ ವೈದ್ಯಕೀಯ ಸಲಹೆಗಾರ

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts