ಜಿಲ್ಲೆ

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಭೇಟಿ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಭೇಟಿ ಮತ್ತು ಕ್ರಿಸ್‌ಮಸ್ ಆಚರಣೆ ಶನಿವಾರ ನಡೆಯಿತು. ಲಯನ್ಸ್ ಜಿಲ್ಲಾ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಭೇಟಿ ನೀಡಿ ಕ್ಲಬ್‌ನ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆ ನಿರ್ದೇಶಕ ಲೆನ್ಸ್‌ನ್ ಲೋಬೋ ಕ್ರಿಸ್‌ಮಸ್ ಹಬ್ಬದ ಸಂದೇಶ ನೀಡಿದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದುರ್ಗಾ ಆಂಗ್ಲ ಮಾಧ್ಯಮ ಶಾಲೆ ಪ್ರತಿನಿಧಿಸಿದ ವಿದ್ಯಾರ್ಥಿನಿ ಅನ್ವಿ ಶೆಟ್ಟಿ ಅವರಿಗೆ 10 ಸಾವಿರ ರೂ ಧನಸಹಾಯ ನೀಡಲಾಯಿತು. ವಲಯ ಅಧ್ಯಕ್ಷ ಧರ್ಮರಾಜ್ ಮುದಲಿಯಾರ್, ವಲಯ ಕಾರ್ಯದರ್ಶಿ ಕೆ.ಆನಂದ ಶೆಟ್ಟಿ, ಜತೆ ಕಾರ್ಯದರ್ಶಿ ಕೆ.ಶೇಖರ ಶೆಟ್ಟಿ, ಲಯನ್ಸ್ ಅಧ್ಯಕ್ಷ ಜಯರಾಮ ನಾಯಕ್, ಕಾರ್ಯದರ್ಶಿ ಐವಾನ್ ದೊನಾತ್ ಸುವಾರಿಸ್, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.