ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ವಕೀಲರ ತಾಲೂಕು ಸಂಘ ಮನವಿ ಸಲ್ಲಿಸಿತು. ವಕೀಲರ ಸಂಘದ ತಾಲೂಕಾಧ್ಯಕ್ಷ ಭೂಪನಗೌಡ ಪಾಟೀಲ್, ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತ್ರದ್, ಕಾರ್ಯದರ್ಶಿ ಬಾಲರಾಜ ಸಾಗರ, ಸಹ ಕಾರ್ಯದರ್ಶಿ ದೇವೇಂದ್ರ ನಾಯಕ, ವಕೀಲರಾದ ಹನುಮಂತರಡ್ಡಿ, ರಾಘವೇಂದ್ರ ಮುತಾಲಿಕ್, ನಾಗರಾಜ ಗಸ್ತಿ, ಜಂಬಣ್ಣ ಮಂಚಾಲಿ, ವೀರಭದ್ರಪ್ಪ ವೈ., ನಂದೀಶ, ನಾಗರಾಜ ಯಲಿಗಾರ, ಮಧು ನಾಡಗೌಡ, ಶರಣಬಸವ, ಸಂಗನಬಸವ, ಹಾಜಿಬಾಬು, ಮಹಾಲಿಂಗಪ್ಪ ಇದ್ದರು. 
ಜಿಲ್ಲೆ

ವಕೀಲರ ಮೇಲೆ ಸುಳ್ಳು ಪ್ರಕರಣ ಸಲ್ಲ

ಪ್ರವೀಣ ಉದುಸಾ ದಲಬಂಜನ್

ಲಿಂಗಸುಗೂರು: ರಾಮನಗರ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲು ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರಿಯ ವಕೀಲರ ಮೇಲಿನ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಪಟ್ಟಣದಲ್ಲಿ ಎಸಿ ಅವಿನಾಶ ಶಿಂಧೆಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದ ನ್ಯಾಯವಾದಿಗಳು, ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಫೆ.7 ರಂದು ನಡೆದ ನೈಜ ಘಟನೆ ತಿರುಚಿ ದೂರುದಾರನೊಂದಿಗೆ ಪಿಎಸ್‌ಐ ಶಾಮೀಲಾಗಿ ಜಿಲ್ಲಾ ವಕೀಲರ ಸಂಘದ 45 ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಪ್ರಕರಣಗಳನ್ನು ಹಿಂಪಡೆಯಬೇಕು. ಅಲ್ಲದೇ ಪಿಎಸ್‌ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರಿಯ ವಕೀಲ ಕೆ.ಕೆ.ಕೋತಾರ ಮೇಲೆ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ವಕೀಲರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.