ಜಿಲ್ಲೆ

ಜೀವನ ಸಾಗಿಸಲು ಕೌಶಲ ಅಗತ್ಯ

ಶಶಿಧರ ಎಲ್

ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಭರವಸೆ ಕೋಶ ಹಾಗೂ ಐಸಿಐಸಿಐ ಬ್ಯಾಂಕ್‌ನಿಂದ ಮಂಗಳವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಪ್ರಾಚಾರ್ಯ ಡಾ.ಜೆಎಲ್ ಈರಣ್ಣ ಮಾತನಾಡಿ, ತಾಂತ್ರಿಕ ಯುಗದಲ್ಲಿ ಬದುಕು ಸಾಗಿಸಲು ಕೌಶಲಗಳು ಅವಶ್ಯವಾಗಿದೆ. ಪದವಿಯೊಂದಿಗೆ ಕೌಶಲ ಕಲಿಕೆಗೆ ಆದ್ಯತೆ ನೀಡಬೇಕು. ಇದರಿಂದ ಉದ್ಯೋಗ ಲಭಿಸಲು ಅನುಕೂಲವಾಗಲಿದೆ ಎಂದರು.

ಬಿಎಫ್‌ಎಸ್‌ಐ ಸಹಾಯಕ ವ್ಯವಸ್ಥಾಪಕ ಕೆ.ಶ್ರೀನಿಧಿ ಮಾತನಾಡಿ, ಉದ್ಯೋಗ ಅವಕಾಶಗಳು ಬಹಳಷ್ಟಿದ್ದು, ಅದಕ್ಕೆ ತಕ್ಕಂತೆ ಅರ್ಹತೆ ಮತ್ತು ಕೌಶಲ ಪಡೆಯಬೇಕು ಎಂದು ತಿಳಿಸಿದರು. 25 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.