More

    ವಿವೇಕದಿಂದ ಜೀವನ ಸಾರ್ಥಕ

    ಗುಳೇದಗುಡ್ಡ: ಜ್ಞಾನದ ದೀಪ್ತಿಯಾಗಿರುವ ಕಲಶ ಪ್ರತಿಷ್ಠಾಪಿಸುವ ಮೂಲಕ ಮನುಷ್ಯನಲ್ಲಿನ ಅಂಧಕಾರ, ಅಜ್ಞಾನ ಹೋಗಲಾಡಿಸಬೇಕು. ಯಾರು ವಿವೇಕದಿಂದ ಜೀವನ ಸಾಗಿಸುತ್ತಾನೋ ಅವನು ಬದುಕಿನಲ್ಲಿ ಸಾರ್ಥಕ ಸಾಧಿಸುತ್ತಾನೆ. ಆತನ ಭವಿಷ್ಯದ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.

    ಪಟ್ಟಣದ ಶ್ರೀ ಹಾದಿಬಸವೇಶ್ವರ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ನಮ್ಮಲ್ಲಿರುವ ಬಂಗಾರದಂತಹ ಜ್ಞಾನ ಬಳಸಿಕೊಂಡು ಜೀವನ ಸಾಗಿಸಿದರೆ ಸರ್ವರ ಬಾಳು ಬಂಗಾರವಾಗುತ್ತದೆ ಎಂದರು.

    ಶ್ರೀ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಹಾದಿ ಬಸವೇಶ್ವರ ದೇವಸ್ಥಾನ ಗೆಳೆಯರ ಬಳಗದಿಂದ ಪೂಜ್ಯರು, ಗಣ್ಯರಿಗೆ ಸನ್ಮಾನಿಸಲಾಯಿತು. ಹಾದಿಬವೇಶ್ವರ ದೇವರಿಗೆ ವಿಶೇಷ ಅಭಿಷೇಕ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಶದ ಭವ್ಯ ಮೆರವಣಿಗೆ ನಡೆಸಲಾಯಿತು. ಪಟ್ಪಣದ ಬಸವರಾಜ ಹೆಗಡೆ ಅವರು ದೇವಸ್ಥಾನದ ಗೋಪುರದ ಕಲಶ ಕೊಡಮಾಡಿದ್ದರು.

    ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಮುತ್ತಣ್ಣ ಕಳ್ಳಿಗುಡ್ಡ, ಅಶೋಕ ಹೆಗಡೆ, ಭುಜಂಗರಾವ ದೇಸಾಯಿ, ಮಲ್ಲೇಶಪ್ಪ ಬೆಣ್ಣಿ, ನೂರಂದಪ್ಪ ಮದ್ದಾನಿ, ಎಸ್.ಐ. ರಾಜನಾಳ, ಚಂದ್ರು ಪಟ್ಟಣಶೆಟ್ಟಿ, ರವಿ ಪಟ್ಟಣಶೆಟ್ಟಿ, ಮಾಗುಂಡಪ್ಪ ದಂಡಿನ, ಸಂತೋಷ ಗಾಣಿಗೇರ, ನಿಂಗಪ್ಪ ಗಾಜಿ, ಮಲ್ಲೇಶಪ್ಪ ಕೆಲೂಡಿ, ಹಂಪಣ್ಣ ಗಾಣಿಗೇರ, ಸಂಗಪ್ಪ ಗುಡದಾರಿ, ರಾಚಪ್ಪ ಅನ್ನಿಗೇರಿ, ಮಲ್ಲೇಶಪ್ಪ ಲಗಳಿ, ವಿನೋದ ಮದ್ದಾನಿ, ರಾಜು ಸಂಗಮ, ಬಸವರಾಜ ಗಾಣಿಗೇರ, ಸಿಂಧೂರ ತೋಳಮಟ್ಟಿ, ನಿಂಗಪ್ಪ ಗಾಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts