ಹರಪನಹಳ್ಳಿ ತಾಲೂಕಿನ ಚನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಸಂಗಪ್ಪನವರ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಬಸಮ್ಮ ಕಲ್ಲಳ್ಳಿ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಹನುಮಂತಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಥೆಗಾರ ಮಂಜಣ್ಣ, ನೌಕರರ ಸಂಘದ ಅಧ್ಯಕ್ಷ ರಾಮಪ್ಪ, ಮುಖ್ಯ ಶಿಕ್ಷಕಿ ಪದ್ಮಲತಾ, ಲಕ್ಷ್ಮೀ ರಾಮಪ್ರಸಾದ್ ಗಾಂಧಿ, ನಾಗರಾಜ್ ಇದ್ದರು. 
ಜಿಲ್ಲೆ

ಎಲ್ಲರೂ ದೇಶಿಯ ಕಲೆ ಉಳಿಸಲು ಕೈಜೋಡಿಸಿ

ಹರಪನಹಳ್ಳಿ: ದೇಶೀಯ ಕಲೆಗಳನ್ನು ಉಳಿಸಿ, ಬೆಳೆಸುವುದರಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಸಂಗಪ್ಪನವರ್ ಹೇಳಿದರು.


ತಾಲೂಕಿನ ಚನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.


ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಜಾಗತೀಕರಣದ ಪರಿಣಾಮ ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದು, ದೇಶೀಯ ಕಲೆಗಳಾದ ನಾಟಕ, ಕೋಲಾಟ, ಬಯಲಾಟ, ಜನಪದ ಗೀತೆದಂತಹ ಕಲೆಗಳು ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.


ಗ್ರಾಪಂ ಸದಸ್ಯರಾದ ಸವಿತಾ ನಾಗರಾಜ್, ಮೀನಾಕ್ಷಿ ಚಂದ್ರನಾಯ್ಕ, ಸಿಆರ್‌ಪಿ. ಪುಷ್ಪಾವತಿ, ಮಂಜುನಾಥ್, ಶರೀಫ್, ನಾಗರಾಜ್ ನಾಯ್ಕ, ಹನುಮಂತ ನಾಯ್ಕ, ನಾಗ್ಯಾನಾಯ್ಕಾ, ಕೆ.ಸಿದ್ದೇಶ್, ಬಂದಮ್ಮ, ವೀರೇಶ ನಾಯ್ಕ ಇತರರಿದ್ದರು.