ರಕ್ತದಾನ ಶಿಬಿರವನ್ನು ಜಿ.ವೆಂಕಟೇಶ ಶೆಣೈ ಉದ್ಘಾಟಿಸಿದರು.  
ಜಿಲ್ಲೆ

ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಲಿ

ಗಂಗೊಳ್ಳಿ: ರಕ್ತದಾನ ವಾಡುವುದು ಪುಣ್ಯದ ಕೆಲಸ. ನಾವು ನೀಡುವ ಒಂದು ಯುನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ರಕ್ತ ದೇವರು ನಮಗೆ ನೀಡಿದ ಬೆಲೆ ಕಟ್ಟಲಾಗದ ಸಂಪತ್ತು. ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ವಾಡಬೇಕು ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಹೇಳಿದರು.

ಯಕ್ಷಾಭಿವಾನಿ ರಕ್ತದಾನಿಗಳ ಬಳಗ, ಉಡುಪಿ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಸಂಯುಕ್ತಾಶ್ರಯದಲ್ಲಿ ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದ ಸಹಭಾಗಿತ್ವದಲ್ಲಿ 16ನೇ ವರ್ಷದ ಧರ್ಮಸ್ಥಳ ಪಾದಯಾತ್ರೆ ಪ್ರಯುಕ್ತ ಗಂಗೊಳ್ಳಿ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ಪತ್ರಕರ್ತ ಬಿ.ರಾವೇಂದ್ರ ಪೈ, ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಹಾಗೂ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲದ ವೈದ್ಯೆ ಡಾ.ನಮಿತಾ ಶುಭ ಹಾರೈಸಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಗಂಗೊಳ್ಳಿ ಗ್ರಾಪಂ ಸದಸ್ಯ ಚಂದ್ರ ಖಾರ್ವಿ, ಪಾದಯಾತ್ರೆ ಬಳಗದ ಸಂಚಾಲಕ ರಾಮಚಂದ್ರ ಖಾರ್ವಿ, ಚರಣ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷಾಭಿವಾನಿ ರಕ್ತದಾನಿಗಳ ಬಳಗ ಅಧ್ಯಕ್ಷ ಅಶೋಕ್ ಎನ್.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.