ಸಂಡೂರಿನಲ್ಲಿ ರೋಟರಿ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಜಿಲ್ಲಾ ಗವರ್ನರ್ ತ್ರಿವಿಕ್ರಮ ಜೋಷಿ, ವಿಜಯನಗರ ಝೋನ್ ಜಿಲ್ಲಾ ಗವರ್ನರ್ ರಾಜೇಶ್ ಕೋರಿಶೆಟ್ಟರ್, ಶಾಸಕಿ ಅನ್ನಪೂರ್ಣಾ ತುಕಾರಾಮ್, ನೂತನ ಅಧ್ಯಕ್ಷ ಪ್ರಕಾಶ ಕುಮಾರ ಜೈನ್ ಇತರರಿದ್ದರು. 
ಜಿಲ್ಲೆ

ಯುವಕರು ರೋಟರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ

ಸಂಡೂರು: ಪೊಲಿಯೋ ನಿರ್ಮೂಲನೆ ಹಾಗೂ ಮರ-ಗಿಡಗಳನ್ನು ಬೆಳೆಸುವಲ್ಲಿ ರೋಟರಿ ಸಂಸ್ಥೆ ಪಾತ್ರ ಮಹತ್ವದ್ದಾಗಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ತ್ರಿವಿಕ್ರಮ ಜೋಷಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದಲ್ಲಿ ಸಂಸ್ಥೆಯಿಂದ ರಕ್ತಪರೀಕ್ಷೆ, ಡಯಾಲಿಸಿಸ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಯುವಕರನ್ನು ರೋಟರಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸೋಣ ಎಂದರು.

ಶಾಸಕಿ ಅನ್ನಪೂರ್ಣಾ ತುಕಾರಾಮ್ ಮಾತನಾಡಿ, ಸಂಸ್ಥೆಯಲ್ಲಿ ಗೌರವ ಸದಸ್ಯತ್ವ ದೊರಕಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಪ್ಲಾಸ್ಟಿಕ್ ಮುಕ್ತ ಸಂಡೂರು ನಿರ್ಮಾಣಕ್ಕೆ ಪಣ ತೊಡಲಾಗುವುದು ಎಂದು ತಿಳಿಸಿದರು. ನೂತನ ಅಧ್ಯಕ್ಷ ಪ್ರಕಾಶ ಕುಮಾರ ಜೈನ್ ಮತ್ತು ತಂಡದವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ವೈದ್ಯ ರಾಮಶೆಟ್ಟಿ ಹಾಗೂ ಸಿಎ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.

ವಿಜಯನಗರ ಜೋನ್ ಜಿಲ್ಲಾ ಗವರ್ನರ್ ರಾಜೇಶ್ ಕೋರಿಶೆಟ್ಟರ್, ಪ್ರಮುಖರಾದ ಎಂ.ಮಾರುತಿರಾವ್ ಭೋಂಸ್ಲೆ, ಶಿವಪ್ಪ, ಬಸವರಾಜ ಮಸೂತಿ, ಅಂಕಮನಾಳ್ ಕೊಟ್ರೇಶಿ ಇತರರಿದ್ದರು.