ಇಳಕಲ್ಲದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಜೈನ ಯುವ ಸಂಘದ ಅಧ್ಯಕ್ಷ ನವೀನ ಮೆಹತಾ ಉದ್ಘಾಟಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ. ಚಳಗೇರಿ, ಎಂ.ವಿ. ಕಂಬಾಗಿ, ಶರಣಪ್ಪ ಬಾಗೋಡಿ, ಬಸವರಾಜ ಮುರನಾಳ ಇತರರಿದ್ದರು. 
ಜಿಲ್ಲೆ

ಅಂಗವಿಕಲರು ಮನೋಸ್ಥೈರ್ಯ ಬೆಳೆಸಿಕೊಳ್ಳಲಿ

ಗಿರೀಶ ಸಗರ

ಇಳಕಲ್ಲ(ಗ್ರಾ) : ಅಂಗವಿಕಲ ದಿನಾಚರಣೆ ಸಂದರ್ಭದಲ್ಲಿ ಅಂಗವಿಕಲರಿಗೆ ಮನೋಸ್ಥೈರ್ಯ ಹೆಚ್ಚಿಸುವ ಹಾಗೂ ಸರ್ಕಾರದ ಗಮನಸೆಳೆಯುವ ಕೆಲಸಗಳು ಆಗಬೇಕೆಂದು ಜೈನ ಯುವ ಸಂಘದ ಅಧ್ಯಕ್ಷ ನವೀನ ಮೆಹತಾ ಹೇಳಿದರು.

ಇಲ್ಲಿನ ಶ್ರೀಮಠದ ದಾಸೋಹ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಜಯಸಂಗಮ ಅಂಗವಿಕಲರ ಸಾಮಾಜಿಕ ಸೇವಾಸಂಸ್ಥೆಯ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲರಿಗೆ ಅನುಕಂಪ ಬೇಕಿಲ್ಲ, ಅವಕಾಶಗಳು ಬೇಕಿವೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ. ಚಳಗೇರಿ ಮಾತನಾಡಿ, ಅಚಲ ಗುರಿ ಸಾಧಿಸುವ ಛಲವಿದ್ದರೆ ಮನೋಬಲದಿಂದ ದೈಹಿಕ ನ್ಯೂನತೆ ಮೀರಿ ಸಾಧನೆ ಮಾಡಲು ಸಾಧ್ಯವಿದೆ.

ಅಂಗವಿಕಲರಾಗಿದ್ದುಕೊಂಡು ಕೃತಕ ಕಾಲುಗಳ ಸಹಾಯದಿಂದ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಉತ್ತರ ಪ್ರದೇಶದ ಅರುಣಿ ಸಿನ್ಹಾಳಂತಹ ಅನೇಕ ಸಾಧಕರಿದ್ದಾರೆ. ಅವರ ಜೀವನ, ಹೋರಾಟ ತಿಳಿದುಕೊಂಡು ನೀವು ಸ್ಫೂರ್ತಿ ಪಡೆಯಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಂ.ವಿ. ಕಂಬಾಗಿ ಮಾತನಾಡಿದರು.

ವಿಜಯಸಂಗಮ ಅಂಗವಿಕಲರ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಶರಣಪ್ಪ ಬಾಗೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವರಾಜ ಮುರನಾಳ, ಎಂಆರ್‌ಡಬ್ಲುೃ ಸಂಗಮೇಶ ಬೀರಗೊಂಡ, ಕಾರ್ಯದರ್ಶಿ ಮುತ್ತಣ್ಣ ರಾಮದುರ್ಗ, ಬಸವರಾಜ ಗೋಟೂರ, ಶಿವಪ್ಪಪುಟ್ಟ, ಮಹ್ಮದರಫೀಕ್ ಮುಲ್ಲಾ ಅಂಗರಾಜ ಆರಿ, ರಾಮಕೃಷ್ಣ ಸಿಂಗಶೆಟ್ಟಿ ಉಪಸ್ಥಿತರಿದ್ದರು.