ಕಂಪ್ಲಿ: ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಲು ಹೊಸ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾದ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಇದನ್ನೂ ಓದಿ:ಚಿನ್ನ ಮತ್ತೆ ಏರಿಕೆ! ಎಷ್ಟು? ಹೀಗಿದೆ ವರದಿ
ತಾಲೂಕಿನ ರಾಮಸಾಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸುವ ಕಡತ ಕೇಂದ್ರದಿಂದ ಐದನೇ ಬಾರಿಗೆ ಹಿಂತಿರುಗಿದೆ. ಸೀಮಿತ ತಿಳುವಳಿಕೆಯುಳ್ಳ ಗಂಗಾಮತಸ್ಥರೇ ನೀಡಿದ ತಪ್ಪು ತಿಳುವಳಿಕೆ ಕಡತದಿಂದ ಎಸ್ಟಿ ಸೇರ್ಪಡೆಗೆ ಹಿನ್ನಡೆಯಾಗುತ್ತಿದೆ. ಪುನಃ ಹಂಪಿ ವಿವಿಗೆ ಕೊಡೆದೆ, ಧಾರವಾಡ ಅಥವಾ ಮೈಸೂರು ವಿವಿಯಿಂದ ತಯಾರಿಸಿ ಅಂಬಿಗ, ಬೆಸ್ತ, ಬಾರಿಕ, ಕೋಲಿ, ಕಬ್ಬಲಿಗ ಪರ್ಯಾಯ ಪದಗಳನ್ನು ಮಾತ್ರ ಶಿಫಾರಸ್ಸುಗೊಳಿಸಬೇಕು. ಅವರಿವರು ನೀಡುವ ಕಡತವನ್ನು ಪರಿಗಣಿಸಬಾರದು ಎಂದು ಗಮನ ಸೆಳೆಯಲು ಶೀಘ್ರದಲ್ಲಿಯೇ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ಅಂಬಿಗರ ಚೌಡಯ್ಯನವರ ಗದ್ದುಗೆ ನಿರ್ಮಾಣ ಕಾಮಗಾರಿ ಕಳಪೆ, ಅವೈಜ್ಞಾನಿಕವಾಗಿದ್ದು ಕೂಡಲೇ ಉನ್ನತ ತನಿಖೆಗೊಳಪಡಿಸಬೇಕು. ನನೆಗುದಿಗೆ ಬಿದ್ದ ಗದ್ದುಗೆ ನಿರ್ಮಾಣ ಪೂರ್ಣಗೊಳಿಸಬೇಕು, ಅಭಿವೃದ್ಧಿ ನಿಗಮಕ್ಕೆ ಐದು ಕೋಟಿ ಬದಲು 100 ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.