ಜಿಲ್ಲೆ

ಶಿಮಂತೂರಲ್ಲಿ ಚಿರತೆ ಸೆರೆಗೆ ಬೋನು

ಸೌಮ್ಯ ಆರ್

ಕಿನ್ನಿಗೋಳಿ: ಎಳತ್ತೂರು ದೇವಾಲಯ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಶಿಮಂತೂರು ಶಾಲೆ ಬಳಿಯ ದಡ್ಡು ಎಂಬಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇರಿಸಿದೆ.

ಕಳೆದ ಬುಧವಾರ ಇದೇ ಭಾಗದಲ್ಲಿ ರಾತ್ರಿ 10ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿಯೂ ಚಿರತೆ ಓಡಾಟದ ದೃಶ್ಯ ಸೆರೆಯಾಗಿತ್ತು. ಹೀಗಾಗಿ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲಿಸಿ ಬೋನು ಇರಿಸಿದ್ದಾರೆ. ಸ್ಥಳೀಯರಾದ ವೇದವ್ಯಾಸ ಭಟ್, ಶಿವಪ್ರಸಾದ್ ಭಟ್, ರಾಘವೇಂದ್ರ ಸುವರ್ಣ, ನಾಗೇಶ್, ಹಫೀಝ್, ಇರ್ಷಾದ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮನೀಷ್ ಇದ್ದರು.