ಜಿಲ್ಲೆ

ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

ಸೌಮ್ಯ ಆರ್

ಮೂಡುಬಿದಿರೆ: ಕೆಲದಿನಗಳಿಂದ ಕಲ್ಲಮುಂಡ್ಕೂರು ವ್ಯಾಪ್ತಿಯಲ್ಲಿ ತಿರುಗಾಡಿ ಸಾರ್ವಜನಿಕರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಈ ಭಾಗದಲ್ಲಿ ಚಿರತೆಯೊಂದು ಸುತ್ತಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪಂಚಾಯಿತಿ ಸದಸ್ಯ ವಸಂತ್ ಸಹಿತ ಗ್ರಾಮಸ್ಥರು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಎಸಿಎಫ್ ಪಿ.ಶ್ರೀಧರ್ ಹಾಗೂ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಮಾರ್ಗದರ್ಶನದಲ್ಲಿ ಕಳಸಬೈಲು ಎಂಬಲ್ಲಿ ಮೂರು ದಿನಗಳ ಹಿಂದೆ ಬೋನು ಇಡಲಾಗಿತ್ತು. ಮಂಗಳವಾರ ಮುಂಜಾನೆ ವೇಳೆಗೆ ಚಿರತೆ ಬೋನಿಗೆ ಬಿದ್ದಿದೆ.

ಮೂಡುಬಿದಿರೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ, ಗಸ್ತು ಅರಣ್ಯ ಪಾಲಕ ರಾಜೇಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಬೋನಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ್ದಾರೆ.