ಜಿಲ್ಲೆ

Leopard Death: 8 ವರ್ಷದ ಗಂಡು ಚಿರತೆ ಸಾವು

Uttara Kannada - Subash Hegde

ಶಿರಸಿ: ಸ್ವಾಭಾವಿಕವಾಗಿ ಚಿರತೆ (Leopard) ಮೃತಪಟ್ಟ ಘಟನೆ ತಾಲೂಕಿನ ಜಾನ್ಮನೆ ಅರಣ್ಯ ವ್ಯಾಪ್ತಿಯ ಸರಗುಪ್ಪಾ ವ್ಯಾಪ್ತಿ ಬೆಣಗಾಂವದಲ್ಲಿ ಗುರುವಾರ ನಡೆದಿದೆ. ಸುಮಾರು 8 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಮೈಮೇಲೆ ಯಾವುದೇ ಗಾಯ ಹೊಂದಿರದಿದ್ದ ಈ ಚಿರತೆ ಕಾಡಿನ ಮಧ್ಯೆ ಕೆಲ ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತಗೊಂಡಿದೆ. ಪಶು ಸಂಗೋಪನಾಧಿಕಾರಿ ಡಾ. ಪ್ರಶಾಂತ ಅವರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವನ್ನು ಧೃಢಪಡಿಸಿದ್ದಾರೆ.

Leopard ಅಂತ್ಯಕ್ರಿಯೆ

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜೆ. ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಎನ್. , ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ್, ವಿನಯಕುಮಾರ ಶಿವಣಗಿ, ಕಿರಣ ಬುರ್ಜಿ, ದೇವನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಮರಾಠಿ ಅವರ ಸಮ್ಮುಖದಲ್ಲಿ ಚಿರತೆಯ ಅಂತ್ಯಕ್ರಿಯೆಯನ್ನು ನಡೆಸಲಾಯಿತು.